ಮೈಸೂರು: ಶತಮಾನೋತ್ಸವ ಕಂಡಿರುವ ರಾಜ್ಯದ ಪ್ರತಿಷ್ಠಿತ ವಿಶ್ವ ವಿದ್ಯಾನಿಲಯಗಳಲ್ಲಿ ಒಂದಾಗಿರುವ ಮೈಸುರು ವಿಶ್ವವಿದ್ಯಾಲಯವು ‘ರಾಷ್ಟೀಯ ಶಿಕ್ಷಣ ಸಂಸ್ಥೆಗಳ ರ್ಯಾಂಕಿಂಗ್ ವ್ಯವಸ್ಥೆ’ಯ (NIRF)ಪಟ್ಟಿಯಲ್ಲಿ ನೇ ಸ್ಥಾನ ಪಡೆದಿದೆ.
ಈ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದ ಎಂಎಚ್ ಆರ್ ಡಿ ಅಡಿಯಲ್ಲಿ ಕೊಡಮಾಡಲಾಗುತ್ತದೆ. ಭಾರತದಲ್ಲಿರುವ ಎಲ್ಲ ವಿವಿಧ ವಿಶ್ವವಿದ್ಯಾಲಯಗಳ ಸಾಧನೆಗಳನ್ನು ಮಾನದಂಡಗಳನ್ನು ಇಟ್ಟುಕೊಂಡು ರ‍್ಯಾಂಕಿಂಗ್ ಕೊಡಲಾಗುತ್ತದೆ. ಈಗ ಹೆಮ್ಮೆಯ ವಿಚಾರವೆಂದರೆ ಪ್ರಸಕ್ತ ಸಾಲಿನಲ್ಲಿ ಮೈಸೂರು ವಿಶ್ವವಿದ್ಯಾಲಯವು 27ನೇ ರಾಂಕ್ ಗೆ ಭಾಜನವಾಗಿರುವುದು.
ಎನ್ಐಆರ್ ಎಫ್ ರ‍್ಯಾಂಕಿಂಗ್ ನಿಂದ ಹಲವು ಉಪಯೋಗಗಳಿವೆ. ಕೆಲವೊಂದು ಪ್ರಾಜೆಕ್ಟ್ ಗಳಿಗೆ ಅರ್ಜಿ ಹಾಕುವ ಸಂದರ್ಭದಲ್ಲಿ ನೀವು ಎನ್ಐಆರ್ ಎಫ್ ರ‍್ಯಾಂಕ್ ಪಟ್ಟಿಯಲ್ಲಿ 50ರೊಳಗೆ ಇದ್ದರೆ ಮಾತ್ರ ಅನುಮತಿ ಕೊಡಲಾಗುತ್ತಿರುವುದರಿಂದ ಅಂತಹ ಸೌಲಭ್ಯವನ್ನು ವಿಶ್ವವಿದ್ಯಾಲಯ ಪಡೆದುಕೊಳ್ಳಬಹುದಾಗಿದೆ. ಇನ್ನೆರಡು ಮುರು ತಿಂಗಳಲ್ಲಿ ನ್ಯಾಕ್ ಕಮಿಟಿ ಬರುತ್ತಿರುವುದರಿಂದ ಈ ರ್ಯಾಂಕಿಂಗ್ ಮತ್ತಷ್ಟು ಅನುಕೂಲ ಒದಗಿಸಿದೆ.
ಕಳೆದ ಹಲವು ದಶಕಗಳ ಬಳಿಕ ಮೈಸೂರು ವಿವಿ ಈ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ಸಂತಸ ವ್ಯಕ್ತಪಡಿಸಿದರು.