ಮೈಸೂರಿನಲ್ಲೊಂದು ಡಿಜಿಟಲ್‌ ಸರ್ಕಾರಿ ಶಾಲೆ: ಇಲ್ಲಿ ಹಳಿ ಇಲ್ಲದೇ ಓಡುತ್ತೆ ರೈಲು..!

ಮೈಸೂರು: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಅವನತಿ ಆದಿ ಇಡಿದಿದ್ದರೆ ಮೈಸೂರಿನಲ್ಲೊಂದು ಸರ್ಕಾರಿ ಶಾಲೆ ಖಾಸಗಿ ಶಾಲೆಗಳಿಗೆ ಸೆಡ್ಡುಹೊಡೆದು ರಾಜ್ಯದ ಇತರ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿದೆ.

ಸರ್ಕಾರಿ ಶಾಲೆಯೆಂದರೇ ಸಾಕು ಮೂಗು ಮುರಿಯುವವರೇ ಹೆಚ್ಚು. ಆ ಶಾಲೆ ಅಭಿವೃದ್ಧಿ ಆಗಿಲ್ಲ, ಶಿಕ್ಷಕರಿಲ್ಲ. ಅಲ್ಲಿ ಮಕ್ಕಳಿಗೆ ಬೇಕಾದ ಮೂಲಸೌಕರ್ಯಗಳು, ಶುಚಿತ್ವ, ಉತ್ತಮ ಪರಿಸರ ಮತ್ತು ಶಿಸ್ತು ಇರುವುದಿಲ್ಲ ಎಂಬುದು ಪೋಷಕರ ಮನೋಭಾವ. ಈ ಕಾರಣಕ್ಕೆ ಮಕ್ಕಳಿಗೆ ಕಾನ್ವೆಂಟ್‌ ಅಥವಾ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸುತ್ತಾರೆ. ಅಂತಹ ಸರ್ಕಾರಿ ಶಾಲೆಗಳ ಬಗ್ಗೆ ಮೂಗು ಮುರಿಯುತ್ತಿದ್ದವರು ಇದೀಗ ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುತ್ತಿದ್ದಾರೆ. ಈ ಶಾಲೆಯಲ್ಲಿ ಅಂತದ್ದೇನಿದೆ ಸ್ಪೇಷಲ್ ಅಂತೀರಾ ಮುಂದೆ ಓದಿ.

ಹೌದು. ಶಾಲೆಯ ಮುಂಭಾಗದಿಂದ ಶಾಲೆಯ ಒಳಗೆ ಓಡಿ ಬರುತ್ತಿರುವ ಮಕ್ಕಳು, ಸಾಲು ಸಾಲಾಗಿ ಮಕ್ಕಳನ್ನ ನಿಲ್ಲಿಸಿ ರೈಲಿಗೆ ಹತ್ತಿಸುತ್ತಿರೋ ಶಾಲೆಯ ದೈಹಿಕ ಶಿಕ್ಷಕರು, ಅರೇ ಇದೇನಿದು ಮಾದರಿ ಶಾಲೆಯಂತ ಹೇಳಿ ಈಗ ರೈಲು ಅಂತಿದ್ದಾರಲ್ಲ ಅಂದುಕೊಂಡ್ರಾ ಅಯ್ಯೋ ನೀವು ನೋಡುತ್ತಿರುವ ಹಳಿ ಇಲ್ಲದ ರೈಲು ಶಾಲೆಯ ಕೊಠಡಿಗಳು.

ಮೈಸೂರು ಜಿಲ್ಲೆ ವರಕೂಡು ಸರ್ಕಾರಿ ಶಾಲೆ ಮೊದಲು ಅಷ್ಟೋಂದು ಆಕರ್ಷಕವಾಗಿರಲಿಲ್ಲ. ಮಕ್ಕಳಿಗೆ ಸಾರಿಗೆ ಬಗೆಗಿನ ಶಿಕ್ಷಣ ನೀಡಲು ಮಕ್ಕಳನ್ನ ಶಾಲೆಯತ್ತ ಆಕರ್ಷಿಸಲು ವರಕೂಡು ಮುಖ್ಯ ಶಿಕ್ಷಕ ನರಸಿಂಹಮೂರ್ತಿ ಶಾಲೆಯ ಕಟ್ಟಡ ಗೋಡೆಗಳಿಗೆ ಬಸ್ ಹಾಗೂ ರೈಲಿನ ಚಿತ್ರ ಬಿಡಿಸಲಾಗಿದೆ. ಶಾಲೆಯ ಆವರಣದಲ್ಲಿ ಪ್ರತಿ ನಿತ್ಯ ಹಳಿ ಇಲ್ಲದ ರೈಲು ವರಕೂಡಿಂದ ದೆಹಲಿಗೆ ದೆಹಲಿಯಿಂದ ವರಕೂಡಿಗೆ ಚಲಿಸುತ್ತದೆ. ಮಕ್ಕಳು ನಾವು ಶಾಲೆಗೆ ಆಗುತ್ತಿಲ್ಲ ನಾವು ಪ್ರಯಾಣಿಸುತ್ತ ಅಕ್ಷರ ಕಲಿಯುತ್ತಿದ್ದೇವೆ ಅನ್ನೋ ಮನೋಭಾವನ ಬರಲೆಂದು ಈ ತರಹದ ಚಿತ್ರಗಳನ್ನ ಬಿಡಿಸಲಾಗಿದೆ. ವರಕೂಡು ಸರ್ಕಾರಿ ಶಾಲೆ ಈಗ ಡಿಜಿಟಲ್‌ ಸರ್ಕಾರಿ ಶಾಲೆಯಾಗಿ ಪರಿವರ್ತನೆಯಾಗಿದ್ದು, ಅಲ್ಲದೆ ಈಗ ಸುತ್ತಮುತ್ತ ಗ್ರಾಮಗಳಲ್ಲಿ ಸಖತ್ ಫೇಮಸ್ ಸಹ ಆಗಿದೆ.

ರಾಜ್ಯದ ಇತರೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮಾದರಿಯಾಗ್ತಿರೊ ವರಕೂಡು ಶಾಲೆ, ಮಕ್ಕಳಿಗೆ ಅಗತ್ಯ ಡಿಜಿಟಲ್ ಸೌಲಭ್ಯಗಳನ್ನ ನೀಡಲಾಗುತ್ತಿದೆ. ಅಲ್ಲದೆ, ಶಾಲೆಯ ಮಕ್ಕಳ ಭದ್ರತೆ ಮತ್ತು ಶಿಕ್ಷಕರ ಕಾರ್ಯವೈಖರಿ ಗಮನಿಸುವಿಕೆಗಾಗಿ ಶಾಲೆಯ ಆವರಣದಲ್ಲಿ ಸಿಸಿ ಕ್ಯಾಮರಾಗಳನ್ನು ಸಹ ಅಳವಡಿಸಲಾಗಿದೆ. ಅಲ್ಲದೇ ಸಿಬ್ಬಂದಿ ಮತ್ತು ಮಕ್ಕಳಿಗಾಗಿ ಬಯೋಮೆಟ್ರಿಕ್ ಸೇರಿದಂತೆ ಇನ್ನಿತರ ಹೈಟೆಕ್ ವ್ಯವಸ್ಥೆಯನ್ನು ಸಹ ಈ ಸರ್ಕಾರಿ ಶಾಲೆಯಲ್ಲಿ ಮಾಡಲಾಗಿದೆ.

ಈ ಶಾಲೆ ಇಷ್ಟೊಂದು ಅಭಿವೃದ್ಧಿಯಾಗಲೂ ಶಾಲೆಯ ಮುಖ್ಯೋಪಾಧ್ಯಾಯರ ಪ್ರಮಾಣಿಕ ಪ್ರಯತ್ನ ಪ್ರಮುಖವಾಗಿದೆ. ಸರ್ಕಾರ ನೀಡುವ ಅನುದಾನದೊಂದಿಗೆ ಅರ್ಧ ತನ್ನ ಸ್ವಂತ  ಖರ್ಚಿನಿಂದಲೇ ಶಾಲೆ ಅಭಿವೃದ್ಧಿಗೆ ಮುಖ್ಯ ಶಿಕ್ಷಕ ನರಸಿಂಹಮೂರ್ತಿ ಶ್ರಮಿಸುತ್ತಿರುವುದು ಶ್ಲಾಘನೀಯ. ಶಾಲೆಗೆ ಮುಖ್ಯಶಿಕ್ಷಕರಾಗಿ ಬಂದು ಕೇವಲ 50 ದಿನಗಳಲ್ಲಿ ಶಿಕ್ಷಕರು ಮತ್ತು ಗ್ರಾಮಸ್ಥರ  ಸಹಕಾರದೊಂದಿಗೆ  ಶಾಲೆ ಅಭಿವೃದ್ಧಿ ಪಡಿಸಿರೋದು ಆಶ್ಚರ್ಯವೆ ಸರಿ.

ವರ್ಕೂಡು ಸರ್ಕಾರಿ ಶಾಲೆಯಲ್ಲಿ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ನಮ್ಮ ಶಾಲೆಯಲ್ಲಿ ಮಾತೃಭಾಷೆಯೊಂದಿಗೆ ಆಂಗ್ಲ ಭಾಷೆಗೂ ಹೆಚ್ಚು ಒತ್ತುನೀಡುವ ಗುರಿ ಇದೆ. ಸರ್ಕಾರಿ  ಶಾಲೆಗಳ ಬಗ್ಗೆ ಪೋಷಕರಿಗೆ ಪ್ರೇಮ ಹೆಚ್ಚಿಸಕೊಳ್ಳಬೇಕು. ಖಾಸಗಿ ಶಾಲೆಗಿಂತಲೂ ಹೆಚ್ಚಿನ ಶಿಕ್ಷಣ ಕೊಡುವಲ್ಲಿ ನಾವು ಸರ್ಕಾರಿ ಶಿಕ್ಷಕರು ಮುಂದಾಗಬೇಕು, ಶಾಲೆಯನ್ನ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡುವ ಗುರಿಯನ್ನು ಹೊಂದಿದ್ದೇವೆ, ಮುಂಬರುವ ಶೈಕ್ಷಣಿಕ ವರ್ಷಕ್ಕೆ ಇನ್ನಷ್ಟು ಮಕ್ಕಳನ್ನು ಶಾಲೆಗೆ ಆಕರ್ಷಿಸುವುದಾಗಿ ಹೇಳುತ್ತಾರೆ ಶಾಲೆಯ ಮುಖ್ಯ ಶಿಕ್ಷಕ ನರಸಿಂಹಮೂರ್ತಿ.

Scroll to Top