ಹುಣಸೂರು: ಗ್ರಾಮಕ್ಕೆ ನುಗ್ಗಿದ ಚಿರತೆ ಮರಿಯೊಂದನ್ನು ಹಿಡಿದು ಕಟ್ಟಿ ಹಾಕಿದ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ರಾಮಪಟ್ಟಣ ಗ್ರಾಮದಲ್ಲಿ ನಡೆದಿದೆ.
ಕಾಡಂಚಿನ ಗ್ರಾಮವಾದ ರಾಮಪಟ್ಟಣಕ್ಕೆ 5ತಿಂಗಳ ಮರಿ ಚಿರತೆಯೊಂದು ನುಗ್ಗಿ ಜೋಳದ ಜಮೀನಿನಲ್ಲಿ ಅವಿತು ಕುಳಿತಿತ್ತು. ಚಿರತೆಯನ್ನು ನೋಡಿದ ಕೂಲಿ ಕಾರ್ಮಿಕರು ಗ್ರಾಮಸ್ಥರಿಗೆ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಮಿಸಿದ ಗ್ರಾಮಸ್ಥರು ಜಮೀನಿನಲ್ಲಿ ಹುಡುಕಾಟ ನಡೆಸಿ ಚಿರತೆ ಹಿಡಿದು ಕಟ್ಟಿ ಹಾಕಿದ್ದಾರೆ. ಅಲ್ಲದೇ ಸೆರೆ ಹಿಡಿದ ಚಿರತೆಯನ್ನು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.