ಇನ್ಮುಂದೆ ಆನ್’ಲೈನ್ ಮೂಲಕವೂ ಮೈಸೂರು ರೈಲ್ವೆ ಮ್ಯೂಸಿಯಂ ವೀಕ್ಷಿಸಬಹುದು

ಮೈಸೂರು: ಚಿಣ್ಣರ ಅಚ್ಚುಮೆಚ್ಚಿನ ತಾಣ ಹಾಗೂ ಸಾಂಸ್ಕೃತಿಕ ನಗರಿಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ಮೈಸೂರು ರೈಲ್ವೆ ಮ್ಯೂಸಿಯಂ ಅನ್ನು ಇನ್ಮುಂದೆ ಆನ್ಲೈನ್ ನಲ್ಲೂ ನೋಡಬಹುದಾಗಿದೆ.

ಮೈಸೂರು ವಿಭಾಗೀಯ ರೈಲ್ವೆ ಇಲಾಖೆಯು ರೈಲ್ವೆ ವೆಬ್ ಸೈಟ್ ನಲ್ಲಿ ರೈಲ್ವೆ ಮ್ಯೂಸಿಯಂ ನ ವರ್ಚ್ಯುವಲ್ ಟೂರ್ ಅಭಿವೃದ್ಧಿಪಡಿಸಿದ್ದು, ಸಾರ್ವಜನಿಕರು ಕುಳಿತಲ್ಲಿಯೇ ರೈಲ್ವೆ ಮ್ಯೂಸಿಯಂ ನೋಡುವ ಸೇವೆಗೆ ಇಂದು ಚಾಲನೆ ದೊರೆತಿದೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವೆಬ್ ಸೈಟ್ ವೀಕ್ಷಣೆಗೆ ಚಾಲನೆ ನೀಡಿದರು.

ಕೊರೋನಾ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ರೈಲ್ವೆ ಮ್ಯೂಸಿಯಂ ಡಿಜಿಟಲೀಕರಣ ಮಾಡಿದ್ದು, ವೆಬ್ ಸೈಟ್ ಮೂಲಕ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ.

ಸಾರ್ವಜನಿಕರು https://mysururailmuseum.com/ ವೆಬ್ ಸೈಟ್ ಲಿಂಕ್ ಕ್ಲಿಕ್ಕಿಸುವ ಮೂಲಕ ವರ್ಚ್ಯುವಲ್ ಟೂರ್ ಕೈಗೊಳ್ಳಬಹುದು.

Scroll to Top