“ನಿಮ್ಮ ಮತ-ನಿಮ್ಮಹಕ್ಕು”: ಚಾಮುಂಡಿಬೆಟ್ಟದಲ್ಲಿ ಗಮನ ಸೆಳೆಯುತ್ತಿವೆ ಬಲ್ಪ್’ಗಳ ಸ್ವಾಗತ ಫಲಕ..!

ಮೈಸೂರು: ಲೋಕಸಭಾ ಚುನಾವಣೆ 2019ರ ಹಿನ್ನೆಲೆಯಲ್ಲಿ ವಿಭಿನ್ನ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಲು ಮೈಸೂರು ಜಿಲ್ಲಾಡಳಿತ ವಿಭಿನ್ನ ಪ್ರಯತ್ನ ನಡೆಸಿದೆ.

ಹೌದು. ಈ ಬಾರಿ ವಿಭಿನ್ನ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಲು ಮೈಸೂರು ಜಿಲ್ಲಾಡಳಿತ ಮುಂದಾಗಿದ್ದು ಚಾಮುಂಡೇಶ್ವರಿ ಸನ್ನಿಧಿ ಚಾಮುಂಡಿ ಬೆಟ್ಟದಲ್ಲಿ “ನಿಮ್ಮ ಮತ-ನಿಮ್ಮಹಕ್ಕು” ಎಂಬ ಸ್ವಾಗತಫಲಕ ಹಾಕಿ ಮತದಾನ ಜಾಗೃತಿ ಮೂಡಿಸುತ್ತಿದ್ದು ಸಾರ್ವಜನಿಕರನ್ನು ಸೆಳೆಯುತ್ತಿದೆ. ಈ ಮೂಲಕ ಸ್ವಾಗತ ಫಲಕ ಹಾಕಿ ಮತದಾನದ ಬಗ್ಗೆ ಅಲ್ಲಿಗೆ ಬರುವ ಹೋಗುವ ಸಾರ್ವಜನಿಕರು ಪ್ರವಾಸಿಗರಲ್ಲಿ ಅರಿವು ಮೂಡಿಸಲಾಗುತ್ತಿದೆ.

ಇನ್ನು ದಸರಾ ಸಂದರ್ಭದಲ್ಲಿ ಬಳಸಲಾಗುತ್ತಿದ್ದ ಸ್ವಾಗತ ಫಲಕದ ಜಾಗದಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸುವ ಬಲ್ಪ್ ಬರಹಗಳನ್ನು ಅಳವಡಿಸಲಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ವಿಭಿನ್ನ ರೀತಿಯ ಮತದಾನ ಕುರಿತ ಜಾಗೃತಿಗೆ ಜಿಲ್ಲಾಡಳಿತ ಮುಂದಾಗಿದೆ.

PC: Subramanya

Scroll to Top