5 ವರ್ಷದಿಂದ ನರಕ ಯಾತನೆ: ನಮಗೆ ಅಂಡರ್ ಬ್ರಿಡ್ಜ್ ಬೇಡ ರೈಲ್ವೇಗೇಟ್ ನಿರ್ಮಿಸಲು ಆಗ್ರಹಿಸಿದ ಜನರು

ಮೈಸೂರು: ಕಳೆದ 5 ವರ್ಷದಿಂದ ನರಕ ಯಾತನೆ ಅನುಭವಿಸಿದ್ದೇವೆ. ನಮಗೆ ಅಂಡರ್ ಬ್ರಿಡ್ಜ್ ಬೇಡ ರೈಲ್ವೇಗೇಟ್ ನಿರ್ಮಿಸಿಕೊಡಿ ಎಂದು ರೈಲ್ವೆ ಇಲಾಖೆ ಮತ್ತು ಸರ್ಕಾರಕ್ಕೆ ಡೋರ್ನಹಳ್ಳಿ ಜನತೆ ಮನವಿ ಮಾಡಿದ್ದಾರೆ .

ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನಲ್ಲಿರುವ ಡೋರ್ನಹಳ್ಳಿ ರೈಲ್ವೆ ನಿಲ್ದಾಣದ ಸಮೀಪ, ರೈಲ್ವೆ ಇಲಾಖೆಯವರು ಮೊದಲಿದ್ದ ರಸ್ತೆಯನ್ನು ಮುಚ್ಚಿ ನಿರ್ಮಿಸಿರುವ ಅಂಡರ್ ಬ್ರಿಡ್ಜ್ ನಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ನಮಗೆ ಮೊದಲಿದ್ದ ರಸ್ತೆಗೆನೆ ಒಂದು ರೈಲ್ವೇಗೇಟ್ ನಿರ್ಮಿಸಿಕೊಡಬೇಕಾಗಿ ರೈಲ್ವೆ ಇಲಾಖೆ ಮತ್ತು ಸರ್ಕಾರಕ್ಕೆ ಇಲ್ಲಿನ ಜನರು ಮನವಿ ಮಾಡುತ್ತಿದ್ದಾರೆ.

ಹೀಗಾಗಿ, ಸಾತಿಗ್ರಾಮ, ಹೊಸೂರು ಕಲ್ಲಹಳ್ಳಿ, ಸೌತನಹಳ್ಳಿ, ನಾರಾಯಣಪುರ, ಕಗ್ಗೆರೆ,ತಿಪೂರು, ಹಂಪಾಪುರ, ಮತ್ತು ಲಾಲಂದೇವನಹಳ್ಳಿ, ಬಸವರಾಜಪುರ,ಹೊಸಹಳ್ಳಿ,ಮಾರ್ಚಹಳ್ಳಿ, ಮೂಲೆಪೇಟ್ಲು… ಜನರು ಈ ಅಂಡರ್ ಬ್ರಿಡ್ಜ್ ನಲ್ಲಿ ಸಂಚರಿಸುವುದರಿಂದ, ಇದೇ ಜಾಗದಲ್ಲಿ ರೈಲ್ವೇಗೇಟ್ ನಿರ್ಮಾಣ ಮಾಡಿ ಎಂದು ಆಗ್ರಹಿಸಿದ್ದಾರೆ.

ಈ ಅಂಡರ್ ಪಾಸ್ ನಿರ್ಮಾಣವಾದ ಕೆಲವು ತಿಂಗಳುಗಳು ಕಳೆದ ಮೇಲೆ ಅವೈಜ್ಞಾನಿಕವಾಗಿ ನಿರ್ಮಿಸಿದ ಪರಿಣಾಮ ಸಂಪೂರ್ಣವಾಗಿ ಹಾಳಾಗಿದ್ದು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಜನರು ಮತ್ತು ಭಾರಿ ವಾಹನಗಳು ಸಂಚರಿಸುವ ಮತ್ತು ಎರಡು ಜಿಲ್ಲೆಗಳ ನಡುವೆ ಸಂಪರ್ಕಕಲ್ಪಿಸುವ ಈ ರಸ್ತೆಗೆ ಅಂಡರ್ ಪಾಸ್ ನಿರ್ಮಾಣಮಾಡಿ ಕಳೆದ 5 ವರ್ಷದಿಂದ ಈ ಭಾಗದ ಜನರು ನರಕ ಯಾತನೆ ಅನುಭವಿಸುವಂತೆ ಮಾಡಿದ್ದಾರೆ.

ರೇಲ್ವೆ ಗೇಟ್ ನಿರ್ಮಾಣದಿಂದ ಆಗುವ ಉಪಯೋಗಗಳು:

ಸಾಗರಕಟ್ಟೆ ಸಮೀಪ ಕಾವೇರಿ ನದಿಗೆ ಮೇಲ್ಸೇತುವೆ ನಿರ್ಮಾಣಮಾಡಿ ಉದ್ಘಾಟನಗೊಂಡ ನಂತರ ಮೈಸೂರು ನಿಂದ ಹಾಸನಕ್ಕೆ ಸಂಚರಿಸಲು 40 ಕಿಮೀ ಕಡಿಮೆ ಯಾಗುವುದು, ಈಗಾಗಲೆ ಈ ಮಾರ್ಗದಲ್ಲಿ ರಸ್ತೆಯ ಕಾಮಗಾರಿ ಪೂರ್ಣಗೊಂಡಿದು ಸಂಚಾರಕ್ಕೆ ಯೋಗ್ಯವಾಗಿದೆ. ಆದರೆ ಡೋರ್ನಹಳ್ಳಿ ರೈಲ್ವೆ ನಿಲ್ದಾಣದ ಸಮಿಪನೆ ನಿರ್ಮಿಸಿರುವ ಈ ಅವೈಜ್ಞಾನಿಕ ರೈಲ್ವೆ ಸೇತುವೆಯಿಂದ ಸಂಚಾರಕ್ಕೆ ಅಡ್ಡಿಯಾಗಿದೆ. ಆದರಿಂದ ರೈಲ್ವೆ ಇಲಾಖೆಯ ಅಧಿಕಾರಿಗಳು, ಮತ್ತು ಜನಪ್ರತಿನಿಧಿಗಳು ಇದನ್ನು ಗಮನಿಸಿ ಆದಷ್ಟು ಬೇಗ ಒಂದು ರೈಲ್ವೆ ಗೇಟ್ ನಿರ್ಮಿಸಿಕೊಡಬೇಕಾಗಿ ಮನವಿ ಊರಿನ ಜನರು ಮನವಿ ಮಾಡಿದ್ದಾರೆ.

PC: Manu Siddu

Leave a Comment

Scroll to Top