3 ನಿಮಿಷದಲ್ಲಿ ಚಿತ್ರ ರಚಸಿ ವಿಶ್ವದಾಖಲೆ ನಿರ್ಮಿಸಿದ ಮೈಸೂರಿನ ಯುವಕ

ಮೈಸೂರು: 3 ನಿಮಿಷದಲ್ಲಿ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಚಿತ್ರ ರಚಸಿ ಮೈಸೂರಿನ ಯುವಕನೋರ್ವ ವಿಶ್ವದಾಖಲೆ ನಿರ್ಮಿಸಿದ್ದಾರೆ.

ನಗರದ ಅಭಿಲಾಷ್ ವಿ. ಕೋರಿ ಅವರು ಮೂರು ನಿಮಿಷದಲ್ಲಿ ಚಿತ್ರಿಸಿರುವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಚಿತ್ರ ವಿಶ್ವದಾಖಲೆ ನಿರ್ಮಿಸಿದೆ.

ಮೈಸೂರಿನ ಲಾರ್ಸನ್ ಆ್ಯಂಡ್ ಟೋಬ್ರೋ (L&T)ದಲ್ಲಿ ಕಾರ್ಯ ನಿರ್ವಹಿಸುತ್ತಿ ರುವ ಅಭಿಲಾಷ್ ಅವರು, ಕಳೆದ ಜನವರಿ 28ರಂದು 5*5 ಅಡಿ ಕಾರ್ಡ್ ಬೋರ್ಡ್‌ನಲ್ಲಿ ಗ್ಲೂ ಮತ್ತು ಗ್ಲಿಟರಿಂಗ್ ಬಳಸಿ ಮೂರು ನಿಮಿಷದಲ್ಲಿ ಚಿತ್ರ ಬಿಡಿಸಿದ್ದರು.

ಇವರ ಈ ಸಾಧನೆಯನ್ನು ಗುರುತಿಸಿ ವಲ್ಡ್ ಬುಕ್ ಆಫ್ ಇಂಡಿಯಾ ದಾಖಲೆ ಪ್ರಮಾಣ ಪತ್ರ ನೀಡಿದೆ. ಮೂಲತಃ ಹಾವೇರಿ ಜಿಲ್ಲೆ ದೇವಗಿರಿಯ ಅಭಿಲಾಷ್ ಅವರು, ಸ್ವಯಂ ಪ್ರೇರಿತರಾಗಿ ಚಿತ್ರಕಲೆ ಕಲಿತಿದ್ದು, ಪೆನ್ಸಿಲ್, ಚಾರ್‌ಕೋಲ್, ಬಾಲ್‌ಪೆನ್, ಗ್ಲೂ ಮತ್ತು ಗ್ಲಿಟರಿಂಗ್ ಬಳಸಿ ಚಿತ್ರ ರಚಿಸುತ್ತಾರೆ. ಈ ಹಿಂದೆ ಚಾರ್ಕೋಲ್, ಪೆನ್ಸಿಲ್ ಬಳಸಿ ಪ್ರಧಾನಿ ನರೇಂದ್ರ ಮೋದಿ, ಸಂಸದ ಪ್ರತಾಪಸಿಂಹ, ಸಾಹಿತಿ ಚಂಪಾ, ಚಿತ್ರನಟ ಶ್ರೀನಾಥ್, ಪ್ರಾಣೇಶ, ರಘು ದೀಕ್ಷೀತ್, ಚಂದನ್‌ಶೆಟ್ಟಿ, ಡಾಲಿ ಧನಂಜಯ ಸೇರಿದಂತೆ ಇತರರ ಚಿತ್ರಗಳನ್ನು ಬಿಡಿಸಿ ಅವರಿಗೆ ಕಾಣಿಕೆಯಾಗಿ ನೀಡಿದ್ದಾರೆ.

Scroll to Top