
ಮೈಸೂರು: ಮೈಸೂರಿನಲ್ಲಿ ಬೃಹತ್ ಗಾತ್ರದ ಜೋಡಿ ನಂದಿ ವಿಗ್ರಹ ಭೂಮಿಯಾಳದಲ್ಲಿ ದೊರಕಿ ಕುತೂಹಲ ಉಂಟು ಮಾಡಿದ್ದ ಸ್ಥಳಕ್ಕೆ ರಾಜ ವಂಶಸ್ಥ ಯದುವೀರ್ ಒಡೆಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲೆಯ ಅರಸನ ಕೆರೆ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ ಜಮೀನಿನಲ್ಲಿ ಬೃಹತ್ ನಂದಿ ವಿಗ್ರಹಗಳು ಪತ್ತೆಯಾಗಿತ್ತು. ಇದೀಗ ಆ ಗ್ರಾಮಕ್ಕೆ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖುದ್ದು ಭೇಟಿ ನೀಡಿ ನಂದಿ ವಿಗ್ರಹಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಬೆಳ್ಳಂಬೆಳಿಗ್ಗೆ ಅರಸನಕೆರೆ ಗ್ರಾಮಕ್ಕೆ ಪುರಾತತ್ವ ತಜ್ಞ ಡಾ.ರಂಗರಾಜು ಜೊತೆ ಭೇಟಿ ನೀಡಿದರು. ಗ್ರಾಮದಲ್ಲಿ ಒಂದು ಸುತ್ತು ಓಡಾಟ ನಡೆಸಿದ ಯದುವೀರ್ ಅವರು ಗ್ರಾಮದ ಮುಖಂಡರೋಂದಿಗೆ ಮಾತುಕತೆ ನಡೆಸಿದರು.

You must be logged in to post a comment.