ಮೈಸೂರು ಮೃಗಾಲಯಕ್ಕೆ ಯಶವಂತಪುರ ವಿಧಾನಸಭಾ ಕ್ಷೇತ್ರದ ದಾನಿಗಳಿಂದ ನೆರವು

ಮೈಸೂರು: ಕೊರೋನಾ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯಕ್ಕೆ ಪ್ರವಾಸಿಗರು ಬರುತಿಲ್ಲ ಈಗಾಗಿ ಆರ್ಥಿಕ ಸಂಕಷ್ಟ ಎದುರುಸುತ್ತಿರುವ ಮೃಗಾಲಯಕ್ಕೆ ಯಶವಂತಪುರ ವಿಧಾನಸಭಾ ಕ್ಷೇತ್ರದ ದಾನಿಗಳು ನೆರವು ನೀಡಿದ್ದಾರೆ.

ಹೌದು. ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ದಾನಿಗಳು 72.16 ಲಕ್ಷ ರೂಗಳನ್ನು ನೀಡಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು ಬುಧವಾರ ಯಶವಂತಪುರ ವಿಧಾನಸಭಾ ಕ್ಷೇತ್ರದ ದಾನಿಗಳಿಂದ ಸಂಗ್ರಹಿಸಿದ 72.16 ಲಕ್ಷ ರೂ.ಗಳ ಚೆಕ್ ಗಳನ್ನು ಮೈಸೂರು ಮೃಗಾಲಯಕ್ಕೆ ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಅವರು ನಮ್ಮ ಕ್ಷೇತ್ರದ ವಾಟ್ಸಾಪ್ ಗ್ರೂಪ್ ಗೆ ಮನವಿ ಮಾಡಿದ್ದೆ. ಮೈಸೂರಿಗೆ ಹೋಗುತ್ತಿದ್ದೇನೆ ತಾವು 5 ಸಾವಿರದಿಂದ ಒಂದು ಮುಕ್ಕಾಲು ಲಕ್ಷದವರೆಗೆ ಯಾವುದೇ ಪ್ರಾಣಿಯನ್ನು ದತ್ತು ತೆಗೆದುಕೊಳ್ಳಬಹುದು. ಅದಕ್ಕೆ ಡಿಡಿ ಮೂಲಕ ಅಥವಾ ಚೆಕ್ ಮೂಲಕ ಪಡೆಯಬಹುದು ಎಂದಿದ್ದೆ. ಒಬ್ಬರು ಷರೀಪ್ ಎಂಬವರು ಹತ್ತು ಲಕ್ಷರೂ.ಗಳ ಚೆಕ್ ನ್ನು ನೀಡಿದರು. ಬಳಿಕ ಕೆಲವರು 2ಲಕ್ಷ ರೂ.ಗಳಂತೆ ನೀಡಿದ್ದರು. ಒಟ್ಟು 73ಲಕ್ಷ ಸಂಗ್ರಹವಾಗಿದೆ. ಶನಿವಾರ ಮತ್ತೆ 25ಲಕ್ಷರೂ. ಸಂಗ್ರಹ ಮಾಡಬೇಕು ಎಂದು ಹೇಳಿದ್ದೇನೆ. ಅವರನ್ನು ಇಲ್ಲಿಗೆ ಕರೆದುಕೊಂಡು ಬರಬೇಕು ಅಂದುಕೊಂಡಿದ್ದರೂ ಕೊರೋನಾ ಹಿನ್ನೆಲೆಯಲ್ಲಿ ಸಾಧ್ಯವಾಗಿಲ್ಲ. ಇದೆಲ್ಲ ಮುಕ್ತವಾದ ಮೇಲೆ ಅವರನ್ನೇ ಇಲ್ಲಿಗೆ ಕರೆತಂದು ಪರಿಚಯಿಸುತ್ತೇನೆ ಎಂದರು.

ಶಾಸಕರು, ಮಂತ್ರಿಗಳಿಗೆ ನನ್ನ ಮನವಿ ಏನೇಂದರೆ ತಮ್ಮ ತಮ್ಮ ಕೈಲಾದಷ್ಟು ಸಹಾಯವನ್ನು ಮೈಸೂರು ಮೃಗಾಲಯಕ್ಕೆ ನೀಡಿ. ಸಾಕಷ್ಟು ಸಾರ್ವಜನಿಕ ದಾನಿಗಳೂ ಇದ್ದಾರೆ. ಅವರೂ ಕೂಡ ಈ ಒಂದು ಸನ್ನಿವೇಶದಲ್ಲಿ ಸಹಕರಿಸಿ ಎಂದು ಮನವಿ ಮಾಡಿದರು. ಕೊರೋನಾ ಹಿನ್ನೆಲೆಯಲ್ಲಿ ಮೃಗಾಲಯಕ್ಕೆ ಪ್ರವಾಸಿಗರು ಬರಲ್ಲ. ಅದಕ್ಕಾಗಿ ಸಾರ್ವಜನಿಕರು ಕೂಡ ಸಹಕರಿಸಿ ಎಂದು ಮನವಿ ಮಾಡಿದರು.

Leave a Comment

Scroll to Top