
ಮೈಸೂರು: ಮೈಸೂರಿನ ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷದ ಪ್ರಯುಕ್ತ 01.01.2020 (ಬುಧವಾರ) ಬೆಳಿಗ್ಗೆ 4 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಎರಡು ಲಕ್ಷ ತಿರುಪತಿ ಮಾದರಿಯ ಲಡ್ಡುವನ್ನು ಭಕ್ತಾದಿಗಳಿಗೆ ವಿತರಿಸುವ ಕಾರ್ಯಕ್ರಮ ನಡೆಯಲಿದೆ.
ಕಳೆದ ಹಲವಾರು ವರ್ಷಗಳಿಂದ ಲಡ್ಡುವಿತರಿಸುವ ಕಾರ್ಯವನ್ನು ನಡೆಸಿಕೊಂಡು ಬರಲಾಗಿದ್ದು, ಈ ವರ್ಷವೂ ಸಹ ನೂತನ ಕ್ರೈಸ್ತ ವರ್ಷಾರಂಭದ ಅಂಗವಾಗಿ ಜನವರಿ 1ರ ಬೆಳಿಗ್ಗೆ 4 ಗಂಟೆಯಿಂದ ದೇವಾಲಯಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ “ಎರಡು ಲಕ್ಷ ತಿರುಪತಿ ಮಾದರಿಯ ಲಡ್ಡು ವಿತರಣಾ” ಮಾಡಲಾಗುತ್ತದೆ.
ವಿಡಿಯೋ ನೊಡಿ:
ಈ ವರ್ಷ ಅಂದಾಜು (2000)ಗ್ರಾಂ ತೂಕದ (10,000) ಲಡ್ಡುಗಳು ಹಾಗೂ (200)ಗ್ರಾಂ ತೂಕದ (2 ಲಕ್ಷ) ಲಡ್ಡುಗಳನ್ನು ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ವಿತರಿಸಲಾಗುವುದು. ಲಡ್ಡು ಪ್ರಸಾದವನ್ನು ವಿಶೇಷವಾಗಿ 50 ಮಂದಿ ನುರಿತ ಬಾಣಸಿಗರಿಂದ ತಯಾರಿಸಲಾಗಿದ್ದು, 20.12.2019 ರಿಂದ ಪ್ರಾರಂಭಿಸಿ 31.12.2017 ರವರೆಗೂ ಲಡ್ಡು ತಯಾರಿ ಕಾರ್ಯ ನಡೆಯಲಿದೆ.
ಲಡ್ಡು ತಯಾರಿಕೆಗೆ 50 ಕ್ವಿಂಟಾಲ್ ಕಡ್ಲೆಹಿಟ್ಟು, 100 ಕಿಂಟಾಲ್ ಸಕ್ಕರೆ, 4000 ಲೀಟರ್ ಖಾದ್ಯ ತೈಲ, 200 ಕೆ.ಜಿ. ಗೋಡಂಬಿ, 200 ಕೆ.ಜಿ. ಒಣದ್ರಾಕ್ಷಿ, 100 ಕೆ.ಜಿ. ಬಾದಾಮಿ, 200 ಕೆ.ಜಿ ಡೈಮಂಡ್ ಸಕ್ಕರೆ, 500 ಕೆ.ಜಿ. ಬೂರಾ ಸಕ್ಕರೆ, 10 ಕೆ.ಜಿ. ಪಿಸ್ತಾ, 20 ಕೆ.ಜಿ, ಏಲಕ್ಕಿ, 20 ಕೆ.ಜೆ. ಜಾಕಾಯಿ ಮತ್ತು ಜಾಪತ್ರೆ, 5 ಕೆ ಜಿ. ಪಚ್ಚೆ ಕರ್ಪೂರ, 100 ಕೆ.ಜಿ, ಲವಂಗಗಳನ್ನು ಬಳಸಿ ತಯಾರಿಸಲಾಗಿದೆ.
You must be logged in to post a comment.