ಅ.1 ರಿಂದ ಪ್ರಾರಂಭವಾಗಲಿರುವ ಯುವ ದಸರಾ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ ನೋಡಿ

ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಅ.1ರಿಂದ 6 ರವರೆಗೆ 6ದಿನಗಳ ಕಾಲ ಯುವ ದಸರಾ ಕಾರ್ಯಕ್ರಮ ನಡೆಯಲಿದೆ.

  • ಅ.1ರಂದು ಬಾಲಿವುಡ್ ಗಾಯಕ ಗುರು ರಾಂಧವ್ ಮತ್ತು ತಂಡ,
  • ಅ.2ರಂದು ಬಾಲಿವುಡ್ ಗಾಯಕ ಮೋಹಿತ್ ಚೌಹಾಣ್ ಮತ್ತು ತಂಡ,
  • ಅ.3ರಂದು ಬಾಲಿವುಡ್ ಖ್ಯಾತ ಗಾಯಕರಾದ ಮೊನಾಲಿ ಠಾಕೂರ್ ಮತ್ತು ತಂಡ,
  • ಅ.4ರಂದು ಸ್ಯಾಂಡಲ್ ವುಡ್ ಗಾಯಕ ಸಂಜಿತ್ ಹೆಗಡೆ, ಚಂದನ್ ಶೆಟ್ಟಿ, ಮೀಡಿಯಾ ಸ್ಟೇಶನ್ ಅವರಿಂದ ಮನರಂಜನಾ ಕಾರ್ಯಕ್ರಮ,
  • ಅ.5ರಂದು ಸ್ಯಾಂಡಲ್ ವುಡ್ ನೈಟ್ಸ್ ಕಾರ್ಯಕ್ರಮ,
  • ಅ.6ರಂದು ಬಾಲಿವುಡ್ ಗಾಯಕ ಪ್ರೀತಮ್ ಚಕ್ರವರ್ತಿ ತಂಡದವರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ ಎಂದರು.

ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ತಾರೆಯರ ಮೆರಗು ನೀಡಲಿದ್ದಾರೆ. ಖ್ಯಾತ ನಟ ದರ್ಶನ್, ಡಾಲಿ ಧನಂಜಯ, ದಿಗಂತ್, ಸಾಧುಕೋಕಿಲ, ರಕ್ಷಿತ್ ಶೆಟ್ಟಿ ಮುಂದಾದ ತಾರೆಯರು ಸ್ಯಾಂಡಲ್ ವುಡ್ ನೈಟಲ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇನ್ನು ಯುವ ಸಂಭ್ರಮದಲ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಯಾದ ಕಾಲೇಜು ತಂಡಗಳ ನೃತ್ಯ ಪ್ರದರ್ಶನವನ್ನು ಪ್ರತಿದಿನ ಸಂಜೆ 6.00 ರಿಂದ 6.30ರವರೆಗೆ ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಕಲಾವಿದರ ತಂಡಗಳು ಮನರಂಜನಾ ಕಾರ್ಯಕ್ರಮವನ್ನು ಸಂಜೆ 6.30ರಿಂದ 7ರವರೆಗೆ ನೀಡಲಿವೆ. ರಾಜ್ಯ/ರಾಷ್ಟ್ರದ ಖ್ಯಾತ ಕಲಾವಿದರ ತಂಡಗಳಾದ ಇಲಿಮಿನೇಟಿ ಯುವಿ ಆಕ್ಟ್, ಮಂಗಳೂರಿನ ಬಾಯ್ ಝೋನ್ ಡ್ಯಾನ್ಸ್ ಗ್ರೂಪ್, ಕಿಂಗ್ಸ್ ಯುನೈಟೆಡ್, ಎಸ್.ಬಿ.ಟಾಕೀಸ್ ಇತ್ಯಾದಿ ಇತರೆ ಕಲಾವಿದರ ತಂಡಗಳಿಂದ ಮನರಂಜನಾ ಕಾರ್ಯಕ್ರಮ ಸಂಜೆ 7ರಿಂದ 8ರವರೆಗೆ ನಡೆಯಲಿದೆ.

Leave a Comment

Scroll to Top