ದಸರಾ ಗಜಪಡೆಯ ಮಾವುತರು, ಕಾವಾಡಿಗರಿಗೆ ಇಂದು ಕೋವಿಡ್‌ ಪರೀಕ್ಷೆ ನಡೆಸಲಾಯಿತು

ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅರಮನೆಗೆ ಆಗಮಿಸಿರುವ ಅಭಿಮನ್ಯು ನೇತೃತ್ವದ ಗಜಪಡೆ ಮಾವುತರಿಗೆ ಇಂದು ಕೋವಿಡ್‌ ಪರೀಕ್ಷೆ ನಡೆಸಲಾಯಿತು.

ಕೊರೋನಾ ಮುಂಜಾಗ್ರತಾ ಕ್ರಮವಾಗಿ ಮೈಸೂರಿನ ಅರಮನೆಯಲ್ಲಿ ದಸರಾ ಆನೆಗಳ ಜತೆ ಬೀಡುಬಿಟ್ಟಿರುವ ಮಾವುತರು, ಕಾವಾಡಿಗಳಿಗೆ ಇಂದು ಕೊರೋನಾ ಟೆಸ್ಟ್ ಮಾಡಲಾಗಿದೆ.

5 ಆನೆಗಳ ಮಾವುತ, ಕಾವಾಡಿ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಕೊರೋನಾ ಟೆಸ್ಟ್ ಮಾಡಲಾಯಿತು. 15ಕ್ಕೂ ಹೆಚ್ಚು ಮಾವುತ ಕಾವಾಡಿಗಳು ಆ್ಯಂಟಿಜನ್ ರ್ಯಾಪಿಡ್ ಟೆಸ್ಟ್ ಮಾಡಿಸಿಕೊಂಡಿದ್ದು, ಇಂದು ಸಂಜೆಯೊಳಗೆ ಮಾವುತ ಕಾವಾಡಿಗಳ ಕೊರೋನಾ ಟೆಸ್ಟ್ ರಿಸಲ್ಟ್ ಬರಲಿದೆ. ಹೀಗಾಗಿ ಕೊರೋನಾ ಪರೀಕ್ಷೆ ವರದಿ ಬಂದ ನಂತರವಷ್ಟೇ ಮುಂದಿನ ತಾಲೀಮಿನ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Comment

Share on facebook
Facebook
Share on twitter
Twitter
Share on pinterest
Pinterest
Share on whatsapp
WhatsApp
Scroll to Top