‘ಚಂದಮಾಮ’ದ ವಿಕ್ರಂ-ಬೇತಾಳ ಚಿತ್ರ ರಚಿಸುತ್ತಿದ್ದ ಶಂಕರ್ ತಾತಯ್ಯ ಇನ್ನಿಲ್ಲ

ಚೆನ್ನೈ: ‘ಚಂದಮಾಮ’ ನಿಯತಕಾಲಿಕದಲ್ಲಿ ವಿಕ್ರಂ-ಬೇತಾಳ ಮತ್ತಿತರ ಪ್ರಸಿದ್ಧ ಕತೆಗಳಿಗೆ ಚಿತ್ರ ರಚಿಸುತ್ತಿದ್ದ ಕೆ.ಸಿ. ಶಿವಶಂಕರನ್ (ಶಂಕರ್ ತಾತಯ್ಯ) ಇಂದು ಮಧ್ಯಾಹ್ನ ವಯೋಸಹಜ ಕಾಯಿಲೆಯಿಂದಾಗಿ ನಿಧನರಾಗಿದ್ದಾರೆ.

ಅವರಿಗೆ 96 ವರ್ಷ ವಯಸ್ಸಾಗಿತ್ತು. ಕಳೆದ ಶತಮಾನದ ಅರವತ್ತರ ದಶಕದಿಂದ ಹಿಡಿದು ತೊಂಬತ್ತರ ದಶಕದವರೆಗೂ ‘ಚಂದಮಾಮ’ದಲ್ಲಿನ ಚಿತ್ರಗಳು ಮತ್ತು ಕತೆಗಳು ಎಲ್ಲ ವಯೋಮಾನದ ಜನರನ್ನು ಸೂಜಿಗಲ್ಲಿನಂತೆ ಸೆಳೆದು ಮೋಡಿ ಮಾಡಿದ್ದವು. ಮೂಲ ‘ಚಂದಮಾಮ’ ಸರಣಿಯ ಸದಸ್ಯರಲ್ಲಿ ಇವರೊಬ್ಬರೇ ಕೊನೆಯ ಕೊಂಡಿಯಾಗಿದ್ದರು.

Share on facebook
Facebook
Share on twitter
Twitter
Share on pinterest
Pinterest
Share on whatsapp
WhatsApp

Leave a Comment

Your email address will not be published. Required fields are marked *

Scroll to Top