ದ್ವಿಶತಕ ಬಾರಿಸಿ ದಾಖಲೆ ಬರೆದ ಕನ್ನಡಿಗ ಮಯಾಂಕ್ ಅಗರ್ವಾಲ್!

ಇಂದೋರ್: ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಮಾಯಾಂಕ್ ಅಗರ್ವಾಲ್ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಬಾಂಗ್ಲಾದೇಶ ವಿರುದ್ಧ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದರು.

304 ಎಸೆತಗಳನ್ನು ಎದುರಿಸಿದ ಅಗರ್ವಾಲ್ 25 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ ದ್ವಿಶತಕ ಪೂರೈಸಿದರು. ಈ ಮೂಲಕ ಅತೀ ಕಡಿಮೆ ಇನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸಿದ 2ನೇ ಕ್ರಿಕೆಟಿಗ ಅನ್ನೋ ದಾಖಲೆ ಬರೆದೆರು.

ಸೌತ್ ಆಫ್ರಿಕಾ ವಿರುದ್ದದ ವಿಶಾಖಪಟ್ಟಣಂ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಮೊದಲ ಡಬಲ್ ಸೆಂಚರಿ ಸಿಡಿಸಿದ್ದರು. ಇದೀಗ ಸತತ 2ನೇ ಸರಣಿಯಲ್ಲಿ ಮಯಾಂಕ್ ದ್ವಿಶತಕದ ಸಾಧನೆ ಮಾಡಿದ್ದಾರೆ.

ಅತೀ ಕಡಿಮೆ ಇನಿಂಗ್ಸ್‌ನಲ್ಲಿ ದ್ವಿಶತಕ ಸಾಧನೆ

  • 5 (ಇನಿಂಗ್ಸ್) ವಿನೋದ್ ಕಾಂಬ್ಲಿ
  • 12 (ಇನಿಂಗ್ಸ್) ಮಯಾಂಕ್ ಅಗರ್ವಾಲ್
  • 13 (ಇನಿಂಗ್ಸ್) ಡಾನ್ ಬ್ರಾಡ್ಮನ್
  • 14 (ಇನಿಂಗ್ಸ್) ವಿಲಿಯಂ ಎಲ್ ರೋವೆ
  • 15 (ಇನಿಂಗ್ಸ್) ಗ್ರೇಮ್ ಸ್ಮಿತ್
  • 16 (ಇನಿಂಗ್ಸ್) ವ್ಯಾಲಿ ಹ್ಯಾಮಂಡ್
  • 18 (ಇನಿಂಗ್ಸ್) ಚೇತೇಶ್ವರ್ ಪೂಜಾರ

Leave a Comment

Scroll to Top