ಹಿಂದೂ ಧರ್ಮದ ಸೆಳೆತಕ್ಕೆ ಮಾರುಹೋದ ಅಮೆರಿಕನ್ ಅಥ್ಲೀಟ್​..!

ಕ್ರೀಡೆ: ಜಗತ್ತಿನಲ್ಲಿ ಹಲವು ಧರ್ಮಗಳಿವೆ. ಆದ್ರೆ ಹಿಂದೂ ಧರ್ಮಕ್ಕೆ ವಿಶಿಷ್ಠ ಸ್ಥಾನವಿದೆ. ಹಿಂದೂ ಧರ್ಮದ ಸಂಪ್ರಾದಾಯಗಳು, ಆಚಾರ ವಿಚಾರಗಳು ಅನ್ಯ ಧರ್ಮವರನ್ನ ಸೆಳೆಯುತ್ತವೆ. ಅದರಲ್ಲು ವಿದೇಶಿಗರಿಗೆ ಹಿಂದೂ ಸಂಸ್ಕೃತಿ ಬಗ್ಗೆ ಅದರ ಹಿನ್ನೆಲೆ ತಿಳಿದುಕೊಳ್ಳುವ ಕುತೂಹಲ, ಆಸಕ್ತಿ ಹೆಚ್ಚಾಗಿರುತ್ತೆ.

ಈಗ ಅಮೇರಿಕಾದ ಖ್ಯಾತ ಈಜುಪಟು, ಲಂಡನ್​ ಒಲಿಂಪಿಕ್ಸ್​ನಲ್ಲಿ ನಾಲ್ಕು ಬಂಗಾರದ ಪದಕ ಗೆದ್ದ ಮಿಸ್ಸಿ ಫ್ರಾಂಕ್ಲಿನ್, ಹಿಂದೂ ಧರ್ಮದೆಡೆಗೆ ಆಕರ್ಷಿತರಾಗಿದ್ದಾರೆ. ಹಿಂದೂ ಧರ್ಮದಲ್ಲಿನ ನೈತಿಕ ಅಂಶಗಳಿಗೆ ಮಾರುಹೋಗಿದ್ದಾರೆ. ರಾಮಾಯಣ, ಮಹಾಭಾರತ ಓದುತ್ತಿದ್ದಾರೆ.

ಜಾರ್ಜಿಯಾ ಯೂನಿವರ್ಸಿಟಿಯಲ್ಲಿ ಹಿಂದೂಯಿಸಂ ಕುರಿತು ಆಳವಾಗಿ ಅಧ್ಯಯನ ಮಾಡುತ್ತಿದ್ದಾರೆ. ಹೌದು, 23 ವರ್ಷದ ಫ್ರಾಂಕ್ಲಿನ್ ಒಲಿಂಪಿಕ್ಸ್​ನಲ್ಲಿ ಒಟ್ಟು 5 ಪದಕಗಳನ್ನ ಮುಡಿಗೇರಿಸಿಕೊಂಡ ಸಾಧನೆ ಮಾಡಿದ್ದಾರೆ. ಆದ್ರೆ ಧೀರ್ಘ ಕಾಲದ ಭುಜ ನೋವಿನಿಂದಾಗಿ, ಕಳೆದ ವರ್ಷ ನಿವೃತ್ತಿ ಘೋಷಿಸಿದ ಫ್ರಾಂಕ್ಲಿನ್ ಹಿಂದೂ ಧರ್ಮದ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಕ್ರೀಡಾ ಸಮಾರಂಭವೊಂದರಲ್ಲಿ ಫ್ರಾಂಕ್ಲಿನ್ ಈ ವಿಷಯವನ್ನ ಹೇಳಿಕೊಂಡಿದ್ದಾರೆ. ನಾನು ಕ್ರಿಶ್ಚಿಯನ್ ಆಗಿದ್ರು, ನನಗೆ ಹಿಂದೂ ಹಾಗು ಇಸ್ಲಾಂ ಧರ್ಮದ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿತ್ತು. ಹೀಗಾಗಿ ನಾನು ಹಿಂದೂ ಧರ್ಮ ದ ಪುರಾಣಗಳನ್ನ, ಕಥೆಗಳನ್ನ ಓದಲು ಶುರುಮಾಡಿದೆ. ನನಗೆ ಈ ಧರ್ಮದಲ್ಲಿನ ಹಲವು ಅಂಶಗಳು ಇಷ್ಟವಾಗಿವೆ. ಅದರಲ್ಲು ಕರ್ಮಸಿದ್ಧಾಂತಕ್ಕೆ ನಾನು ಮಾರುಹೋಗಿದ್ದೇನೆ ಎಂದು ಫ್ಲಾಂಕ್ಲಿನ್ ಹೇಳಿದ್ದಾರೆ.

Leave a Comment

Scroll to Top