
ಮುಂಬೈ: ಮುಂಬೈನಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು FC ಚಾಂಪಿಯನ್ ಕಿರೀಟ ಅಲಂಕರಿಸಿದೆ.
ಫೈನಲ್ ಪಂದ್ಯದಲ್ಲಿ FC ಗೋವಾ ತಂಡವನ್ನು 1-0 ಅಂತರದಿಂದ ಮಣಿಸಿದ BFC(ಬೆಂಗಳೂರು ಎಫ್‌ಸಿ) ಪ್ರಶಸ್ತಿ ಗೆದ್ದುಕೊಂಡಿತು. ರೋಚಕ 90 ನಿಮಿಷಗಳ ಹೋರಾಟದಲ್ಲಿ ಯಾವುದೇ ಗೋಲು ದಾಖಲಾಗಿರಲಿಲ್ಲ. ಹೀಗಾಗಿ ಹೆಚ್ಚುವರಿ ಸಮಯ ನೀಡಲಾಯಿತು. 116ನೇ ನಿಮಿಷದಲ್ಲಿ ಬೆಂಗಳೂರು ತಂಡದ ಭಾರತೀಯ ಆಟಗಾರ ರಾಹುಲ್ ಬೆಕೆ ಅದ್ಬುತ ಗೋಲು ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಪ್ರಥಮಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸಿಲ್ಲ, ಆದರೆ ಮೊದಲ ಅವಧಿ ಅತ್ಯಂತ ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಯಿತು. ಬೆಂಗಳೂರು ಹಾಗೂ ಗೋವಾಗೆ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು. ಆದರೆ ಗೋವಾದ ಗೋಲ್‌ಕೀಪರ್ ನವೀನ್ ಕುಮಾರ್ ಹಾಗೂ ಬೆಂಗಳೂರಿನ ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧೂ ಅದಕ್ಕೆ ಅವಕಾಶ ಕೊಡಲಿಲ್ಲ.
CHAM6IONS.??⚽
— Rahul Bheke (@RahulBheke) March 18, 2019
Finally happy to have won the @IndSuperLeague after having lost in the finals last year. Even more happy to have scored the winning goal in the final & bring a smile on my mother's face & also to each and every @bengalurufc fan. #WeAreBFC pic.twitter.com/3fXfgfaN0x
ಗೋವಾ ಆಕ್ರಮಣಕಾರಿ ಆಟಕ್ಕೆ ಮನಸ್ಸು ಮಾಡಿದ್ದರೂ, ಬೆಂಗಳೂರಿನ ಡಿಫೆನ್ಸ್ ಅದಕ್ಕೆ ತಕ್ಕ ರೀತಿಯಲ್ಲಿ ಬ್ರೇಕ್ ಹಾಕಿತ್ತು. ಒಂದು ಹಂತದಲ್ಲಿ ಮಿಕು ಹಾಗೂ ಸುನಿಲ್ ಛೆಟ್ರಿ ಬೆಂಗಳೂರು ಪರ ಗೋಲು ಗಳಿಸುವ ಅವಕಾಶವನ್ನು ಕೈ ಚೆಲ್ಲಿದ್ದರು. ಇದರೊಂದಿಗೆ ಪ್ರಥಮ ಅವಧಿ ಗೋಲಿಲ್ಲದೆ ಅಂತ್ಯಗೊಂಡಿತು. ದ್ವಿತಿಯಾರ್ಧ ಮತ್ತಷ್ಟು ಕುತೂಹಲಕ್ಕೆ ಕಾರಣವಾಯಿತು. ಹಳದಿ ಕಾರ್ಡ್‌ಗಳು ಮೇಳೈಸಿದವು. ಗೋಲಿಗಾಗಿ ಹೋರಾಟ ತೀವ್ರಗೊಂಡಿತು. ಆದರೆ ದ್ವಿತಿಯಾರ್ಧವೂ ಗೋಲಿಲ್ಲದೆ ಅಂತ್ಯಗೊಂಡಿತು.
ಹೆಚ್ಚುವರಿ ಸಮಯದಲ್ಲೂ ಗೋಲುಗಳಿಸುವ ಅವಕಾಶಗಳೆಲ್ಲಾ ಕೈತಪ್ಪಿ ಹೋಗುತ್ತಿತ್ತು. ಆದರೆ ರಾಹುಲ್ ಬೆಕೆ ಬಾರಿಸಿದ ಅದ್ಬುತ ಗೋಲು ಬೆಂಗಳೂರು ಎಫ್‌ಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಅಷ್ಟರಲ್ಲೇ ಬೆಂಗಳೂರು ವೆಸ್ಟ್‌ಬ್ಲಾಕ್ ಕ್ಲಬ್ ಅಭಿಮಾನಿಗಳಲ್ಲಿ ಸಂಭ್ರಮಾಚರಣೆ ಶುರುವಾಯಿತು. ಕಳೆದ ವರ್ಷ ಐಎಸ್‌ಎಲ್ ಟೂರ್ನಿಗೆ ಕಾಲಿಟ್ಟ ಬೆಂಗಳೂರು ಎಫ್‌ಸಿ ಮೊದಲ ಪ್ರಯತ್ನದಲ್ಲೇ ಫೈನಲ್ ಪ್ರವೇಶಿಸ್ತು. ಆದರೆ ಚೆನ್ನೈಯನ್ ಎಫ್‌ಸಿ ವಿರುದ್ಧ ಮುಗ್ಗರಿಸಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಇದೀಗ ಪ್ರಶಸ್ತಿ ಬರ ನೀಗಿಸಿಕೊಂಡಿದೆ.
You must be logged in to post a comment.