ಕನ್ನಡಿಗ ರಾಹುಲ್ ಕ್ರೀಡಾ ಸ್ಫೂರ್ತಿಗೆ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದ ಅಂಪೈರ್..!

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೆಯ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಕ್ರೀಡಾ ಸ್ಫೂರ್ತಿ ಮೆರೆದಿದ್ದಾರೆ.

ಮೂರನೆ ದಿನದಾಟದಲ್ಲಿ ಭಾರತದ ಕ್ಷೇತ್ರರಕ್ಷಣೆ ವೇಳೆ ರವೀಂದ್ರ ಜಡೇಜಾ ಎಸೆದ 14ನೇ ಓವರ್‍ನಲ್ಲಿ ರಾಹುಲ್ ಡೈವ್ ಮಾಡಿ ಕ್ಯಾಚ್ ಹಿಡಿದಿದ್ದರು. ಕ್ಯಾಚ್ ಪಡೆದಿದ್ದನ್ನು ಗಮನಿಸಿದ ಆಟಗಾರು ಸಂಭ್ರಮಿಸಿದ್ದಾರೆ.

ಆದರೆ ರಾಹುಲ್ ಕ್ಯಾಚ್ ಹಿಡಿದಿರಲಿಲ್ಲ. ಸ್ವಲ್ಪದರಲ್ಲೇ ಕ್ಯಾಚ್ ಮಿಸ್ ಆಗಿತ್ತು. ಈ ವೇಳೆ ಕ್ರೀಡಾ ಸ್ಫೂರ್ತಿ ಮೆರೆದ ರಾಹುಲ್ ಕ್ಯಾಚ್ ಹಿಡಿದಿಲ್ಲ ಎಂದು ಅಂಪೈರ್ ಗಳಿಗೆ ತಿಳಿಸಿದರು. ಅಂಪೈರ್‍ಗಳು ರಾಹುಲ್ ಈ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿ ಚಪ್ಪಾಳೆ ತಟ್ಟಿ, ಥಂಬ್ಸ್ ಅಪ್ ನೀಡಿದ್ದಾರೆ.

ಪ್ರಸಕ್ತ ಸರಣಿಯಲ್ಲೇ ಅನೇಕ ಬಾರಿ ಕ್ಯಾಚ್‍ಗಳು ವಿವಾದವಾಗಿತ್ತು. ವಿವಾದದ ನಡೆಯೂ ರಾಹುಲ್ ಕ್ರೀಡಾ ಸ್ಫೂರ್ತಿ ತೋರಿಸಿದ್ದು ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Scroll to Top