2019ರ ಏಕದಿನ ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಮೆಗಾ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಎಲ್ಲಾ ತಂಡಗಳು, ಆಂಗ್ಲರ ನಾಡಲ್ಲಿ ಸಮರಭ್ಯಾಸದಲ್ಲಿ ನಿರತವಾಗಿವೆ. ಮೇ 30ರಂದು ವಿಶ್ವಕಪ್ ಪಂದ್ಯಾವಳಿ ಆರಂಭವಾಗಲಿದೆ.
46 ದಿನಗಳ ಕಾಲ ನಡೆಯುವ 2019 ಐಸಿಸಿ ಏಕದಿನ ವಿಶ್ವಕಪ್‌ಗೆ ಇಂಗ್ಲೆಂಡ್ ಹಾಗೂ ವೇಲ್ಸ್ ಆತಿಥ್ಯ ವಹಿಸುತ್ತಿದೆ. ಭಾರತ ತಂಡವು ತನ್ನ ಮೊದಲ ಕದನದಲ್ಲಿ ಜೂನ್ 5ರಂದು ದಕ್ಷಿಣ ಆಫ್ರಿಕಾ ಸವಾಲನ್ನು ಎದುರಿಸಲಿದೆ. ಅಂದ ಹಾಗೆ ವಿಶ್ವಕಪ್ ಮೇ 30ರಿಂದ ಜುಲೈ 14ರ ವರೆಗೆ ಸಾಗಲಿದೆ.
ಭಾರತದ ವಿಶ್ವಕಪ್ ಪಂದ್ಯಗಳ ವೇಳಾಪಟ್ಟಿ (ದಿನಾಂಕ, ಪಂದ್ಯ, ಸ್ಥಳ, ಸಮಯ)
ಅಭ್ಯಾಸ ಪಂದ್ಯಗಳು:
- ಮೇ 25, ಶನಿವಾರ: ನ್ಯೂಜಿಲೆಂಡ್, ಲಂಡನ್, ಸಮಯ: 3 ಗಂಟೆಗೆ
- ಮೇ 28, ಮಂಗಳವಾರ: ಬಾಂಗ್ಲಾದೇಶ, ಕಾರ್ಡಿಫ್, ಸಮಯ: 3 ಗಂಟೆಗೆ
ಲೀಗ್ ಹಂತದ ಪಂದ್ಯಗಳು: (ಸಮಯ ಭಾರತೀಯ ಕಾಲಮಾನದಂತೆ)
- ಜೂನ್ 05, ಬುಧವಾರ: ದಕ್ಷಿಣ ಆಫ್ರಿಕಾ, ಸೌಥಂಪ್ಟನ್, ಸಮಯ: 3 ಗಂಟೆಗೆ.
- ಜೂನ್ 09, ಭಾನುವಾರ: ಆಸ್ಟ್ರೇಲಿಯಾ, ಲಂಡನ್, ಸಮಯ: 3 ಗಂಟೆಗೆ
- ಜೂನ್ 13, ಗುರುವಾರ: ನ್ಯೂಜಿಲೆಂಡ್, ನಾಟಿಂಗ್‌ಹ್ಯಾಮ್, ಸಮಯ: 3 ಗಂಟೆಗೆ
- ಜೂನ್ 16, ಭಾನುವಾರ: ಪಾಕಿಸ್ತಾನ, ಮ್ಯಾಚೆಂಸ್ಟರ್, ಸಮಯ: 3 ಗಂಟೆಗೆ
- ಜೂನ್ 22, ಶನಿವಾರ: ಅಫಘಾನಿಸ್ತಾನ, ಸೌಥಂಪ್ಟನ್, ಸಮಯ: 3 ಗಂಟೆಗೆ
- ಜೂನ್ 27, ಗುರುವಾರ: ವೆಸ್ಟ್‌ಇಂಡೀಸ್, ಮ್ಯಾಚೆಂಸ್ಟರ್, ಸಮಯ: 3 ಗಂಟೆಗೆ
- ಜೂನ್ 30, ಭಾನುವಾರ: ಇಂಗ್ಲೆಂಡ್, ಬರ್ಮಿಂಗ್‌ಹ್ಯಾಮ್, ಸಮಯ: 3 ಗಂಟೆಗೆ
- ಜುಲೇ 02, ಮಂಗಳವಾರ: ಬಾಂಗ್ಲಾದೇಶ, ಸೌಥಂಪ್ಟನ್, ಸಮಯ: 3 ಗಂಟೆಗೆ
- ಜುಲೈ 06, ಶನಿವಾರ: ಶ್ರೀಲಂಕಾ, ಲೀಡ್ಸ್, ಸಮಯ: 3 ಗಂಟೆಗೆ
ನಾಕೌಟ್ ಹಂತ
- ಜುಲೈ 09, ಮಂಗಳವಾರ: ಮೊದಲ ಸೆಮಿಫೈನಲ್ (1 vs 4), ಮ್ಯಾಚೆಂಸ್ಟರ್
- ಜುಲೈ 11, ಗುರುವಾರ: ದ್ವಿತೀಯ ಸೆಮಿಫೈನಲ್ (2 vs 3), ಬರ್ಮಿಂಗ್‌ಹ್ಯಾಮ್
ಫೈನಲ್: ಜುಲೈ 14, ಭಾನುವಾರ, ಲಂಡನ್.