
ಮುಂಬೈ: ಭಾರತ ಮಲ್ಲಕಂಬ ತಂಡ, ಭಾನುವಾರ ಮುಕ್ತಾಯಗೊಂಡ ಮೊದಲ ಮಲ್ಲಕಂಬ ವಿಶ್ವ ಚಾಂಪಿಯನ್ಷಿಪ್ನಲ್ಲಿ ಸ್ವರ್ಣ ಪದಕ ಗೆದ್ದುಕೊಂಡಿದೆ.
ಸೆಂಟ್ರಲ್ ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ನಡೆದ ಕೂಟದಲ್ಲಿ 15 ದೇಶಗಳಿಂದ ತಂಡಗಳು ಸ್ಪರ್ಧಿಸಿದ್ದವು. ತಂಡ ಚಾಂಪಿಯನ್ಷಿಪ್ ವಿಭಾಗದಲ್ಲಿ 244.73 ಅಂಕ ಪಡೆದ ಭಾರತ ಚಾಂಪಿಯನ್ಪಟ್ಟ ಅಲಂಕರಿಸಿದರೆ, 44.45 ಅಂಕ ಪಡೆದ ಸಿಂಗಾಪುರ ಹಾಗೂ 30.22 ಅಂಕ ಪಡೆದ ಮಲೇಷ್ಯಾ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಪಡೆದವು.
ಕರ್ನಾಟಕದ ಮೂಡುಬಿದರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ವೀರಭದ್ರ ಮುದೋಳ್ 6 ಸದಸ್ಯರ ಭಾರತ ತಂಡದ ಭಾಗವಾಗಿದ್ದರು.
You must be logged in to post a comment.