
ಕ್ರಿಕೆಟ್: ಭಾನುವಾರ ನಡೆದ ಐಪಿಎಲ್ ಫೈನಲ್ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಗೆದ್ದು ಬೀಗಿತ್ತು. ಗೆಲುವಿನ ಸಮೀಪದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕೊನೆಯ ಓವರ್ನಲ್ಲಿ ಎಡವಿತ್ತು. ಈ ಪಂದ್ಯದಲ್ಲಿ ಆಟಗಾರ ಶೇನ್ ವಾಟ್ಸನ್ ಅಬ್ಬರದ ಆಟವಾಡಿ ಸಿಎಸ್ಕೆಯನ್ನು ಗೆಲುವಿನ ಸಮೀಪ ಕರೆತಂದಿದ್ದರು.
ಆದರೆ, ಕೊನೆಯ್ ಓವರ್ನಲ್ಲಿ ರನ್ಔಟ್ ಆಗಿದ್ದು, ಸಿಎಸ್ಕೆ ಸೋಲಿಗೆ ಕಾರಣವಾಗಿತ್ತು. ಅಚ್ಚರಿ ಎಂದರೆ, ಅವರ ಕಾಲಲ್ಲಿ ರಕ್ತ ಸುರಿಯುತ್ತಿದ್ದರೂ ಯಾರಿಗೂ ಹೇಳದೇ ಬ್ಯಾಟ್ ಬೀಸಿದ್ದರಂತೆ ವಾಟ್ಸನ್. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮ್ಯಾಚ್ ನಡೆದ 20 ಗಂಟೆಗಳ ನಂತರ ಹರ್ಭಜನ್ ಸಿಂಗ್ ಶೇನ್ ವ್ಯಾಟ್ಸನ್ರ ಪೋಟೋ ಹಾಕಿ ವ್ಯಾಟ್ಸನ್ ಮೊಣಕಾಲಲ್ಲಿ ಕೆಂಪಗೆ ಕಾಣ್ತಿರೋದು ಏನು ಗೊತ್ತಾ? ಅದು ರಕ್ತ. ಪಂದ್ಯದ ವೇಳೆ, ಯಾರಾದ್ರು ವಾಟ್ಸನ್ ಮೊಣಕಾಲಿನಿಂದ ಸುರಿಯುತ್ತಿದ್ದ ರಕ್ತವನ್ನು ನೋಡಿದ್ದೀರಾ? ಪಂದ್ಯದ ನಂತರ ಆ ಗಾಯಕ್ಕೆ 6 ಹೊಲಿಗೆಗಳು ಬಿದ್ದಿವೆ. ಆಟದ ವೇಳೆ ರನ್ ಔಟ್ ಆಗೋದನ್ನು ತಪ್ಪಿಸಿಕೊಳ್ಳಲು ಡೈವ್ ಮಾಡಿದ್ದಾರೆ ಈ ವೇಳೆ ಗಾಯವಾಗಿದೆ. ಆದ್ರೆ, ಯಾರಿಗೂ ಹೇಳದೇ ಆಟವನ್ನು ಮುಂದುವರಿಸಿದ್ದಾರೆ ಅಂತಾ ಪೋಸ್ಟ್ ಮಾಡಿದ್ದಾರೆ.
Is that really blood ???
— Pathan Usif (@Pathan4141) May 13, 2019
??
O god
Why did no one ask him or talk about it
Not even one from onfield and comemtators ???
Seen in that he injured got 6 stitches after match
Didnt tell anyone and played his best #Legend@ChennaiIPL #Watson @ShaneRWatson33
?? pic.twitter.com/IyIuu814bu
ಯಾವಾಗ ಭಜ್ಜಿ ಈ ಫೋಟೋವನ್ನು ಪೋಸ್ಟ್ ಮಾಡಿದ್ರೋ ಶೇನ್ ವಾಟ್ಸನ್ ಸೋಶಿಯಲ್ ಮೀಡಿಯಾದಲ್ಲಿ ಅಕ್ಷರಶಃ ಹೀರೋ ಆಗಿದ್ದಾರೆ. ಅವರ ಕಮಿಟ್ಮೆಂಟ್ಗೆ ವಿಶ್ವ ಕ್ರಿಕೆಟ್ ಪ್ರೇಮಿಗಳು ಸಲಾಂ ವಾಟ್ಸನ್ ಅಂತಿದ್ದಾರೆ.
You must be logged in to post a comment.