ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್ ಐಪಿಎಲ್ ಪಂದ್ಯಾವಳಿಗೆ ದಿನಾಂಕ ನಿಗದಿ

ನವದೆಹಲಿ: ಬಹುನಿರೀಕ್ಷಿತ ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ ಆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 2020ರ 13ನೇ ಆವೃತ್ತಿಯು ಯುಇಎನಲ್ಲಿ ಸೆಪ್ಟೆಂಬರ್‌ 19 ರಂದು ಆರಂಭಗೊಂಡು ನವೆಂಬರ್‌ 8ರಂದು ಪೈನಲ್‌ ಪಂದ್ಯದ ಮೂಲಕ ಅಂತ್ಯಗೊಳ್ಳಲಿದೆ ಎಂದು ಐಪಿಎಲ್‌ ಮುಖ್ಯಸ್ಥ ಬ್ರಿಜೇಶ್‌ ಪಟೇಲ್ ತಿಳಿಸಿದ್ದಾರೆ.

ಕೊರೊನಾದಿಂದಾಗಿ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತೋ ಇಲ್ವೋ ಎಂಬ ಬಗ್ಗೆ ಕ್ರಿಕೆಟ್​ ಪ್ರಿಯರಿಗೆ ಭಾರೀ ನಿರಾಸೆ ಮೂಡಿಸಿತ್ತು. ಒಂದು ಹಂತದಲ್ಲಿ ರದ್ದಾಗುವ ಹಂತದಲ್ಲಿದ್ದ ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ ಮತ್ತೆ ನಡೆಯುವ ಹಂತದಲ್ಲಿದೆ.

ಕಳೆದ ಮಾರ್ಚ್ 29 ರಿಂದ ಐಪಿಎಲ್ ಆರಂಭವಾಗಬೇಕಿತ್ತು. ಆದರೆ, ಕೋವಿಡ್​​​-19 ಹರಡಿದ ಹಿನ್ನೆಲೆಯಲ್ಲಿ ಕ್ರಿಕೆಟ್​ ಹಬ್ಬಕ್ಕೆ ತಡೆ ನೀಡಲಾಗಿತ್ತು. ಒಂದು ವೇಳೆ, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯದಿದ್ದರೆ, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಸುಮಾರು 4,000 ಕೋಟಿ ರೂ. ನಷ್ಟವಾಗಲಿದೆಯಂತೆ.

Scroll to Top