ಮತ್ತೊಂದು ಗರಿಮೆಗೆ ಪಾತ್ರರಾದ ಮೇರಿ ಕೋಮ್

ಮತ್ತೊಂದು ಗರಿಮೆಗೆ ಪಾತ್ರರಾದ ಮೇರಿ ಕೋಮ್

ನವದೆಹಲಿ: ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಘ ಇತ್ತೀಚಿಗೆ ಬಿಡುಗಡೆ ಮಾಡಿರುವ ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಎಮ್. ಸಿ. ಮೇರಿ ಕೋಮ್ ಅಗ್ರ ಸ್ಥಾನ ಪಡೆದಿದ್ದಾರೆ.

ಬಾಕ್ಸಿಂಗ್ ನಲ್ಲಿ ಆರು ವಿಶ್ವ ಚಾಂಪಿಯನ್’ಶಿಫ್ ಗೆದ್ದ ಮೊದಲ ಮಹಿಳಾ ಬಾಕ್ಸರ್ ಎನ್ನುವ ಖ್ಯಾತಿ ಪಡೆದ ಎರಡು ತಿಂಗಳ ನಂತರ ಗುರುವಾರದಂದು ಬಾಕ್ಸಿಂಗ್ ವಿಶ್ವ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

36 ವರ್ಷದ ಮೇರಿ ಕೋಮ್ 45-48 ಕಿಲೋಗ್ರಾಮ್ ವಿಭಾಗದಲ್ಲಿ ಇಂಟರ್ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಷನ್ ​​(ಎಐಬಿಎ) ಬಿಡುಗಡೆ ಮಾಡಿದ ರ್ಯಾಂಕಿಂಗ್ ಪಟ್ಟಿಯಲ್ಲಿ 1700 ಅಂಕಗಳನ್ನು ಪಡೆಯುವ ಮೂಲಕ ಅಗ್ರಸ್ತಾನ ಗಳಿಸಿದರು. ಕೋಮ್ ಆರನೇ ವಿಶ್ವ ಚಾಂಪಿಯನ್ಷಿಪ್ ನ್ನು ಉಕ್ರೇನ್ನ ಹನ್ನಾ ಒಖೋಟಾವನ್ನು 5-0 ಅಂತರದಿಂದ ಸೋಲಿಸುವ ಮೂಲಕ ತಮ್ಮದಾಗಿಸಿಕೊಂಡರು. ಈಗ 1100 ಪಾಯಿಂಟ್ಗಳೊಂದಿಗೆ ಒಖೊಟಾ ವಿಶ್ವದ ಎರಡನೆಯ ಸ್ಥಾನದಲ್ಲಿದ್ದಾರೆ.

ಮೇರಿಕೋಮ ಆ ಮೂಲಕ ಕ್ಯೂಬನ್ ದಂತಕಥೆ ಫೆಲಿಕ್ಸ್ ಸಾವೊನ್ ಅವರ ಆರು ವಿಶ್ವ ಚಾಂಪಿಯನ್ ಶಿಪ್ ದಾಖಲೆಯನ್ನು ಸರಿಗಟ್ಟಿದರು. 2018ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮತ್ತು ಪೋಲೆಂಡ್ನಲ್ಲಿರುವ ಸಿಲೇಷ್ಯನ್ ಓಪನ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಬಲ್ಗೇರಿಯಾದ ಸ್ಟ್ರಾಂಡ್ಜಾ ಮೆಮೋರಿಯಲ್ನಲ್ಲಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.

Scroll to Top