ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ಎಂ.ಎಸ್ ಧೋನಿ

ಅಂತರರಾಷ್ಟ್ರೀಯ ಕ್ರಿಕೆಟ್’ಗೆ ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ವಿದಾಯ ಹೇಳಿದ್ದಾರೆ.

ಧೋನಿ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ನಿಂದ ದೂರ ಉಳಿದಿದ್ದರು. ವಿವಿಧ ಚಟುವಟಿಕೆಗಳ ಮೂಲಕ ರಜೆ ದಿನಗಳನ್ನು ಕಳೆಯುತ್ತಿದ್ದ ಧೋನಿ ಇಂದು ಧಿಡೀರ್ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಿದ್ದಾರೆ.

39 ವರ್ಷದ ಧೋನಿ, ಕಳೆದೊಂದು ವರ್ಷದಿಂದ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರಲಿಲ್ಲ. ಹಾಗಂತ ತಮ್ಮ ನಿವೃತ್ತಿ ಬಗ್ಗೆಯೂ ಯಾವುದೇ ಮಾಹಿತಿ ನೀಡಿರಲಿಲ್ಲ. ಆದ್ರೆ, ಇಂದು ಅನಿರೀಕ್ಷಿತ​​​ ನಿರ್ಧಾರದ ರೀತಿಯಲ್ಲೇ, ನಿವೃತ್ತಿ ಘೋಷಿಸಿ ಕೋಟ್ಯಂತರ ಅಭಿಮಾನಿಗಳಿಗೆ ಶಾಕ್​ ನೀಡಿದ್ದಾರೆ.

ಈ ಕುರಿತು ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಧೋನಿ.. ಇಲ್ಲಿವರೆಗಿನ ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದ. ಇಂದು ಸಂಜೆ 07:29ರಿಂದ ನಾನು ರಿಟೈರ್ಡ್ ಆಗಿದ್ದೇನೆ ಎಂದು ಪರಿಗಣಿಸಿ ಎಂದಿದ್ದಾರೆ.

Scroll to Top