ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ವಿರುದ್ಧ ವಿಶ್ವಕಪ್ ಪಂದ್ಯವನ್ನು ಬಹಿಷ್ಕಾರ ಮಾಡಬೇಕೆಂಬ ಒತ್ತಾಯ ಹೆಚ್ಚಾಗುತ್ತಿದೆ. ಇದರ ನಡುವೆಯೇ ಈ ಪಂದ್ಯದ ಟಿಕೆಟ್‍ಗಾಗಿ 4 ಲಕ್ಷ ಆನ್‍ಲೈನ್ ಅರ್ಜಿಗಳು ಬಂದಿರುವುದಾಗಿ ವಿಶ್ವಕಪ್ ಟೂರ್ನಿಯ ಆಯೋಜಕ ನಿರ್ದೇಶಕ ಸ್ಟೀವ್ ಎಲ್ವರ್ತಿ ಮಾಹಿತಿ ನೀಡಿದ್ದಾರೆ.
ಜೂನ್ 16 ರಂದು ಪಾಕಿಸ್ತಾನ ಹಾಗೂ ಭಾರತದ ನಡುವಿನ ಪಂದ್ಯ ನಿಗದಿಯಾಗಿದ್ದು, ಇಂಗ್ಲೆಂಡ್‍ನ ಓಲ್ಡ್ ಟ್ರ್ಯಾಫೋರ್ಡ್ ಕ್ರೀಡಾಂಗಣದಲ್ಲಿ ಪಂದ್ಯ ನಡೆದಲಿದೆ. 25 ಸಾವಿರ ಮಂದಿ ಕುಳಿತುಕೊಳ್ಳುವ ಸಾಮಥ್ರ್ಯ ಹೊಂದಿರುವ ಕ್ರೀಡಾಂಗಣದ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರೀ ಸಂಖ್ಯೆಯಲ್ಲಿ ಅರ್ಜಿಗಳು ಬಂದಿದೆ ಎಂದು ಟೂರ್ನಿಯ ಆಯೋಜಕರು ಸ್ಪಷ್ಟಪಡಿಸಿದ್ದಾರೆ.
ವಿಶ್ವಕಪ್ ಪ್ರಚಾರ ಭಾಗವಾಗಿ ಲಂಡನ್ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಟೀವ್ ಎಲ್ವರ್ತಿ, ಲೀಗ್ ಹಂತದಲ್ಲಿ ಪಾಕಿಸ್ತಾನ ಹಾಗೂ ಭಾರತದ ನಡುವಿನ ಪಂದ್ಯದ ಟಿಕೆಟ್‍ಗೆ ಭಾರೀ ಬೇಡಿಕೆ ಬಂದಿದೆ. ಆದರೆ 25 ಸಾವಿರ ಜನರಿಗೆ ಅವಕಾಶ ಲಭಿಸಲಿದ್ದು, ಬಹುತೇಕರು ನಿರಾಸೆ ಅನುಭವಿಸಲಿದ್ದಾರೆ ಎಂದಿದ್ದಾರೆ. ಅಲ್ಲದೇ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ ಅಥವಾ ಲಾರ್ಡ್ಸ್ ಕ್ರಿಕೆಟ್ ಅಂಗಳದಲ್ಲಿ ನಡೆಯುವ ಫೈನಲ್ ಪಂದ್ಯಕ್ಕಿಂತಲೂ ಹೆಚ್ಚಿನ ಬೇಡಿಕೆಯನ್ನು ಪಡೆದಿದೆ ಎಂದು ವಿವರಿಸಿದ್ದಾರೆ.
ಈ ಹಿಂದೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯಕ್ಕೆ 2.4 ಲಕ್ಷ ಅರ್ಜಿಗಳು ಮಾತ್ರ ಬಂದಿತ್ತು. ಪಾಕ್ ಹಾಗೂ ಭಾರತ ನಡುವೆ ನಡೆಯಲಿರುವ ಪಂದ್ಯ ಟೂರ್ನಿಯ ಬಹು ಮುಖ್ಯ ಪಂದ್ಯವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಟೀಂ ಇಂಡಿಯಾ ಅನುಭವಿ ಆಟಗಾರ ಹಭರ್ಜನ್ ಸಿಂಗ್ ಸೇರಿದಂತೆ ಹಲವು ಆಟಗಾರರು ಪಾಕ್ ಜೊತೆ ಆಡದೇ ಅವರಿಗೆ ತಿರುಗೇಟು ನೀಡಬೇಕು. ಕ್ರೀಡಾಂಗಣದ ಬದಲು ಯುದ್ಧ ಭೂಮಿಯಲ್ಲಿ ಭೇಟಿ ಆಗೋಣ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಪಾಕಿಸ್ತಾನ ತಂಡವನ್ನು ಟೂರ್ನಿಯಿಂದ ಹೊರಗಿಡಲು ಐಸಿಸಿ ಒತ್ತಡ ಹಾಕಬೇಕು ಇಲ್ಲವಾದರೆ ಇಡೀ ಟೂರ್ನಿಯನ್ನೇ ಬಹಿಷ್ಕಾರ ಹಾಕಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.