2011ರಿಂದಲೂ ಧೋನಿಯಿಂದ ಕ್ರಿಕೆಟ್ ಪಂದ್ಯದ ಟಿಕೆಟ್ ಪಡೆಯುತ್ತಿದ್ದಾರೆ ಪಾಕಿಸ್ತಾನದ ಅಭಿಮಾನಿ..!

ಲಂಡನ್: ಪಾಕಿಸ್ತಾನ ಭಾರತದ ಕಟ್ಟಾ ಶತ್ರು ರಾಷ್ಟ್ರವೆಂದೇ ಇಡೀ ವಿಶ್ವಕ್ಕೆ ತಿಳಿದಿರುವ ವಿಚಾರ. ಅದೂ ಕ್ರೀಡಾ ಕ್ಷೇತ್ರದಲ್ಲೂ ಹಾಗೆಯೇ ಮುಂದುವರೆದಿದೆ ಕೂಡ. ಭಾರತ ಪಾಕಿಸ್ತಾನದ ನಡುವೆ ನಡೆಯುವ ಮ್ಯಾಚ್ ವೇಳೆ ಹೆಚ್ಚು ಕಡಿಮೆ ಇಡೀ ಭಾರತವೇ ಸ್ತಬ್ಧಗೊಳ್ಳುತ್ತದೆಯಲ್ಲದೇ ಭಾರತ ಪಾಕಿಸ್ತಾನದ ಎದುರು ಎಂದೂ ಸೋಲನ್ನು ಸ್ವೀಕರಿಸಲು ತಯಾರಿಲ್ಲ.

ಪರಿಸ್ಥಿತಿ ಹೀಗಿರುವಾಗ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಯೊಬ್ಬರು 2011ರಿಂದಲೂ ಟೀಂ ಇಂಡಿಯಾ ಖ್ಯಾತ ಆಟಗಾರ ಧೋನಿಯಿಂದ ಟಿಕೆಟ್ ಪಡೆಯುತ್ತಾರೆ ಎಂದರೆ ಇದು ಆಚ್ಚರಿಯಾದರೂ ಸತ್ಯ.

ಹೌದು. ಪಾಕಿಸ್ತಾನ ಮೂಲದ ಮೊಹಮ್ಮದ್ ಬಷೀರ್ ಅಕಾ ಚಾಚಾ ಹಾಗೂ ಮಹೇಂದ್ರ ಸಿಂಗ್ ಧೋನಿ ನಡುವಿನ ಬಾಂಧವ್ಯ, 2011ರ ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ನಡುವಣ ಸೆಮಿಫೈನಲ್ ಪಂದ್ಯದಿಂದಲೂ ಗಟ್ಟಿಯಾಗಿ ನೆಲೆಯೂರಿದೆ.

ಭಾನುವಾರ ನಡೆಯಲಿರುವ ಭಾರತ- ಪಾಕಿಸ್ತಾನ ಕ್ರಿಕೆಟ್ ಪಂದ್ಯಕ್ಕಾಗಿ ಬಷೀರ್ ಅಂದಾಜು 6 ಸಾವಿರ ಕಿಲೋ ಮೀಟರ್ ದೂರದಲ್ಲಿರುವ ಚಿಕಾಗೋದಿಂದ ಮ್ಯಾಂಚೆಸ್ಟರ್ ಗೆ ಬಂದಿದ್ದರೂ ಟಿಕೆಟ್ ಸಿಕ್ಕಿಲ್ಲ. ಈ ಸುದ್ದಿ ತಿಳಿದ ನಂತರ ಧೋನಿ ಟಿಕೆಟ್ ದೊರಕಿಸಿಕೊಟ್ಟಿದ್ದಾರೆ.

ಧೋನಿ ತುಂಬಾ ಬಿಜಿಯಾಗಿರುವುದರಿಂದ ನಾನು ಅವರಿಗೆ ಕರೆ ಮಾಡುವುದಿಲ್ಲ. ಆದರೆ, ಮೆಸೇಜ್​ ಮಾಡುವುದರ ಮೂಲಕ ಅವರೊಂದಿಗೆ ಸಂಪರ್ಕದಲ್ಲಿರುತ್ತೇನೆ. ನಾನು ಇಲ್ಲಿಗೆ ಬರುವುದಕ್ಕೂ ಮುಂಚೆ ಟಿಕೆಟ್​ ಖಾತರಿಯಾಗಿರುವ ಬಗ್ಗೆ ಧೋನಿ ಖಚಿತಪಡಿಸಿದ್ದಾರೆ. ಅವರೊಬ್ಬ ಶ್ರೇಷ್ಠ ವ್ಯಕ್ತಿ ಎಂದು ಪ್ರಶಂಸಿಸಿದ್ದಾರೆ.

ನನಗಾಗಿ ಟಿಕೆಟ್​ ಖರೀದಿಸುವ ಧೋನಿ ಅವರಿಗೆ ಈ ಬಾರಿ ಒಂದು ಆಶ್ಚರ್ಯಕರವಾದ ಉಡುಗೊರೆಯನ್ನು ತಂದಿದ್ದೇನೆ. ಇಂದು ರಾತ್ರಿಯೇ ಅವರಿಗೆ ಉಡುಗೊರೆಯನ್ನು ನೀಡುತ್ತೇನೆ ಎಂಬ ಭರವಸೆ ಇದೆ ಎಂದು ಬಷೀರ್​ ಹೇಳಿದ್ದಾರೆ.

ಇನ್ನು ಜೂನ್​ 16ರ ಭಾನುವಾರದಂದು ಮ್ಯಾಂಚೆಸ್ಟರ್​ನ ಓಲ್ಡ್​ ಟ್ರಾಫೋರ್ಡ್​ ಕ್ರಿಕೆಟ್​ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನದ ಪಂದ್ಯ ನಡೆಯಲಿದೆ.

Leave a Comment

Scroll to Top