ವಿಶ್ವಕಪ್‌ನಲ್ಲಿ ಭಾರತದ ಮೊದಲ ಪಂದ್ಯ ತಡವಾಗಿದ್ದೇಕೆ ಗೊತ್ತಾ..?

ಬೆಂಗಳೂರು: 2019ರ ವಿಶ್ವಕಪ್‌ನಲ್ಲಿ ಆಡುತ್ತಿರವ 10 ತಂಡಗಳ ಪೈಕಿ ಭಾರತ ಬಿಟ್ಟು ಉಳಿದ 9 ತಂಡಗಳು ಈಗಾಗಲೇ ಒಂದು – ಎರಡು ಪಂದ್ಯವನ್ನ ಆಡಿವೆ. ಆದರೆ ಭಾರತ ತಂಡ ಇಂದು ತನ್ನ ಮೊದಲ ಪಂದ್ಯವನ್ನಾಡಲಿದ್ದು, ಇಷ್ಟು ತಡವಾಗಿ ವಿಶ್ವಕಪ್ ಆಡಲು ಕಾರಣವಿದೆ.

ವಿಶ್ವಕಪ್‌ ಆರಂಭಗೊಂಡು ಒಂದು ವಾರದ ಬಳಿಕ ಭಾರತ ತನ್ನ ಮೊದಲ ಪಂದ್ಯವನ್ನಾಡಲು ನ್ಯಾ.ಲೋಧಾ ಸಮಿತಿ ಶಿಫಾರಸು ಕಾರಣ. ಭಾರತ ತಂಡ ಆಡುವ ಎರಡು ಟೂರ್ನಿಗಳ ಮಧ್ಯೆ ಕನಿಷ್ಠ 15 ದಿನಗಳ ಅಂತರವಿರಬೇಕು ಎಂದು ಲೋಧಾ ಸಮಿತಿ ಶಿಫಾರಸು ಹೊರಡಿಸಿದೆ.

ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಳ್ಳುವ ವೇಳೆ ಐಪಿಎಲ್‌ ಫೈನಲ್‌ ಪಂದ್ಯ ಮೇ 19ರಂದು ನಡೆಯಲಿದೆ ಎನ್ನಲಾಗಿತ್ತು. ಹೀಗಾಗಿ 15 ದಿನಗಳ ಬಳಿಕ ವಿಶ್ವಕಪ್’ನ ಮೊದಲ ಪಂದ್ಯ ನಿಗದಿಪಡಿಸಲಾಯಿತು. ಆದರೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವೇಳಾಪಟ್ಟಿ ಬದಲಿಸಿದ ಬಿಸಿಸಿಐ, ಮೇ 12ಕ್ಕೆ ಐಪಿಎಲ್‌ ಫೈನಲ್‌ ನಡೆಸಿತು. ಇದರಿಂದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ಸ್ವಲ್ಪ ತಡವಾಗಿ ಕ್ರಿಕೆಟ್ ಆರಂಭಿಸಿದೆ.

ಇದನ್ನು ಓದಿ: ಐಸಿಸಿ ವಿಶ್ವಕಪ್‌: ಭಾರತ ಆಡುವ ಪಂದ್ಯಗಳ ವೇಳಾಪಟ್ಟಿ

Scroll to Top