![](https://mysuruonline.in/wp-content/uploads/2021/01/sourav-ganguly.jpg)
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ – ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಮತ್ತೆ ಅನಾರೋಗ್ಯಕ್ಕೆ ಒಳಗಾಗಿದ್ದು, ಕೊಲ್ಕತಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎದೆನೋವಿನಿಂದ ನಿನ್ನೆ ಕೊಲ್ಕತ್ತಾದ ವುಡ್ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಾಗಿರುವ ಸೌರವ್ ಗಂಗೂಲಿಗೆ ಇವತ್ತು ಮತ್ತೊಂದು ಸ್ಟಂಟ್ ಅಳವಡಿಸಲಾಗುತ್ತೆ. ಗಂಗೂಲಿ ಅವರಿಗೆ ಗುರುವಾರ ಡಾ.ದೇವಿ ಶೆಟ್ಟಿ ಅವರ ಸಮ್ಮುಖದಲ್ಲಿ ಸ್ಟೆಂಟ್ ಅಳವಡಿಕೆ ಮಾಡಲಾಗುತ್ತದೆ ಎಂದು ವುಡ್ ಲ್ಯಾಂಡ್ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಇತ್ತೀಚೆಗೆ ಲಘು ಹೃದಯಾಘಾತಕ್ಕೊಳಗಾಗಿದ್ದ ಗಂಗೂಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಆಂಜಿಯೋಪ್ಲಾಸ್ಟಿ ಹಾಗೂ ಇನ್ನಿತರ ಚಿಕಿತ್ಸೆ ನೀಡಲಾಗಿತ್ತು. ಸೌರವ್ ಗಂಗೂಲಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಮನೆಗೆ ಕಳಿಸಲಾಗಿತ್ತು. ಅವರ ಹೃದಯಲ್ಲಿ 3 ಬ್ಲಾಕೇಜ್‌ಗಳಿಗದ್ದು, ಒಂದನ್ನು ತೆಗೆದು ಸ್ಟೆಂಟ್ ಅಳವಡಿಸಲಾಗಿದೆ. ಮತ್ತೊಂದು ಸ್ಟೆಂಟ್ ಅಳವಡಿಕೆ ಇಂದು ಮಾಡಲಾಗುತ್ತದೆ.