
ನವದೆಹಲಿ: ಭಾರತೀಯ ಪುಟ್ಬಾಲ್ ತಂಡದ ಸ್ಟಾರ್ ಸ್ಟ್ರೈಕರ್ ಸುನೀಲ್ ಚೆಟ್ರಿ ಅವರಿಗೆ ದೆಹಲಿ ಪುಟ್ಬಾಲ್ ಸಂಸ್ಥೆಯಿಂದ ಮೊದಲ ಬಾರಿಗೆ ಪುಟ್ಬಾಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಜವಹರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ದೆಹಲಿ ಪುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಷಾಜಿ ಪ್ರಭಾಕರನ್ ಪ್ರಶಸ್ತಿ ಪ್ರದಾನ ಮಾಡಿದರು. ಸುನೀಲ್ ಚೆಟ್ರಿ ಪದ್ಮಶ್ರೀ ಪ್ರಶಸ್ತಿ ಪಡೆದ ಆರನೇ ಪುಟ್ಬಾಲ್ ಆಟಗಾರರಾಗಿದ್ದು, ಪುಟ್ಬಾಲ್ ರತ್ನ ಪ್ರಶಸ್ತಿ ಪಡೆದ ಪ್ರಥಮ ಆಟಗಾರರಾಗಿದ್ದಾರೆ.
ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಸುನೀಲ್ ಚೆಟ್ರಿ, ರಾಷ್ಟ್ರ ರಾಜಧಾನಿಯಲ್ಲಿ ಪುಟ್ಬಾಲ್ ಅಭಿವೃದ್ಧಿಗೆ ತಮ್ಮ ಕಡೆಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಪುಟ್ಬಾಲ್ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ದೆಹಲಿಯನ್ನು ರಾಷ್ಟ್ರದಲ್ಲಿ ಮಾದರಿ ಪುಟ್ಬಾಲ್ ರಾಜ್ಯವನ್ನಾಗಿ ಮಾಡಲಾಗುವುದು, ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾರಿಗೂ ಶುಭ ಹಾರೈಸುವುದಾಗಿ ಅವರು ಹೇಳಿದರು.
ಸುನೀಲ್ ಅವರ ಅಸಾಧಾರಣ ಸಾಧನೆಯಿಂದ ದೆಹಲಿ ಪುಟ್ಬಾಲ್ ಸ್ಪೂರ್ತಿಗೊಂಡಿರುವುದಾಗಿ ಪ್ರಭಾಕರನ್ ಮೆಚ್ಚುಗೆ ವ್ಯಕ್ತಪಡಿಸಿದರು.
You must be logged in to post a comment.