![](https://mysuruonline.in/wp-content/uploads/2019/12/Team-India.jpg)
ಕಟಕ್: ಕೆರಿಬಿಯನ್ಸ್ ವಿರುದ್ಧದ ಸತತ 10ನೇ ಸರಣಿಯನ್ನ ಗೆದ್ದು ಭಾರತ ಹೊಸ ದಾಖಲೆ ನಿರ್ಮಿಸಿದೆ. ಇಂದು ಕಟಕ್ನಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯಾಟದಲ್ಲಿ ಕೊಹ್ಲಿಯ ಸಮಯೋಚಿತ ಆಟದಿಂದಾಗಿ ಭಾರತ ಗೆಲುವಿನ ನಗೆ ಬೀರಿದೆ. ವಿರಾಟ್ ಕೊಹ್ಲಿ ಬಳಗಕ್ಕೆ ಇದು 2019ರ ಕೊನೆ ಪಂದ್ಯವಾಗಿದ್ದು, ವರ್ಷದ ಅಂತ್ಯದಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಆರಂಭದಲ್ಲಿ ವಿಂಡೀಸ್ ಆಟಗಾರರನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾಯ್ತು. ಆದ್ರೆ ಓವರ್ ಸಂಖ್ಯೆ ಏರುತ್ತಿದ್ದಂತೆ ಭಾರತದ ಬೌಲರ್ಗಳು ಕೆರಿಬಿಯನ್ನರಿಗೆ ದುಬಾರಿಯಾಗಿ ಬಿಡುತ್ತಾ ಹೋದ್ರು. ನಿಕೋಲಸ್ ಪೂರನ್ ಅವರ 89 ರನ್ ಹಾಗೂ ನಾಯಕ ಪೊಲಾರ್ಡ್ ಅವರ 74 ರನ್ಗಳು ವಿಂಡೀಸ್ಗೆ ಬೃಹತ್ ಮೊತ್ತ ಕಲೆಹಾಕುವಲ್ಲಿ ಸಹಕಾರಿಯಾಯ್ತು. 50 ಒವರ್ಗಳಲ್ಲಿ ವೆಸ್ಟ್ ಇಂಡೀಸ್ 5 ವಿಕೆಟ್ ನಷ್ಟಕ್ಕೆ 315 ರನ್ಗಳನ್ನ ಕಲೆ ಹಾಕಿದ್ರು.
ಬಳಿಕ ಬ್ಯಾಟಿಂಗ್ಗಿಳಿದ ಬ್ಲೂ ಬಾಯ್ಸ್ ಉತ್ತಮ ಪ್ರದರ್ಶನ ನೀಡಿದ್ರು. ರೋಹಿತ್ ಶರ್ಮಾ ಹಾಗೂ ರಾಹುಲ್ ರನ್ಗಳ ಹೊಳೆ ಹರಿಸಿದ್ರು. ಈ ಮೂಲಕ ಭಾರತಕ್ಕೆ ಆರಂಭದಲ್ಲಿ ಬಲ ಸಿಕ್ಕಿದಂತಾಯ್ತು. ನಂತರ ನಾಯಕ ಕೊಹ್ಲಿ ತನ್ನ ಅಮೋಘ ಬ್ಯಾಟಿಂಗ್ ಪ್ರದರ್ಶನ ಮಾಡಿದ್ರು. ಇನ್ನೇನು ಗೆಲುವಿನ ದಡ ಸೇರಿಸುವಷ್ಟರಲ್ಲೇ ಔಟಾದರು. ನಂತರ ಶಾರ್ದುಲ್ ಠಾಕೂರ್ ಹಾಗೂ ರವೀಂದ್ರ ಜಡೆಜಾ ಗೆಲುವು ತಂದುಕೊಟ್ರು.
ಭಾರತದ ಪರ ರೋಹಿತ್ ಶರ್ಮಾ 63, ಕೆಎಲ್ ರಾಹುಲ್ 77, ವಿರಾಟ್ ಕೊಹ್ಲಿ 85, ಶ್ರೇಯಸ್ ಅಯ್ಯರ್ 7, ರಿಷಬ್ ಪಂತ್ 7, ಕೇದಾರ್ ಜಾಧವ್ 9, ರವೀಂದ್ರ ಜಡೆಜಾ 39, ಶಾರ್ದುಲ್ ಠಾಕೂರ್ 17 ರನ್ ಗಳಿಸಿದ್ರು.