Cinema

ವಿಶಿಷ್ಟ ಅಭಿಮಾನಿಯ ಪಾದ ಮುಟ್ಟಿದ ಸೂಪರ್‌ ಸ್ಟಾರ್‌ ರಜನಿಕಾಂತ್‌

ಚೆನ್ನೈ: ಜಾಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ರಜನಿಕಾಂತ್‌ ಅವರು ತಮ್ಮ ಸರಳ ವ್ಯಕ್ತಿತ್ವಕ್ಕೆ ಹೆಸರುವಾಸಿ. ರಜನಿ ದರ್ಶನವಾದರೆ ಸಾಕು, ತಮ್ಮ ಜೀವನ ಧನ್ಯ ಎಂಬ ಮನೋಭಾವ ಅವರ ಅಭಿಮಾನಿಗಳದ್ದು. ರಜನಿಕಾಂತ್ ಇತ್ತೀಚೆಗಷ್ಟೆ ವಿಶೇಷಚೇತನ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅಭಿಮಾನಿ ಕಾಲು ಮುಟ್ಟಿದ್ದಾರೆ. ಕೇರಳದ ಪಾಲ್ಘಾಟ್‍ ನಿವಾಸಿ 21 ವರ್ಷದ ಪ್ರಣವ್‍ ಗೆ ಎರಡೂ ಕೈಗಳಿಲ್ಲ. ಆದರೂ ಚಿತ್ರಕಲೆ ಸೇರಿ ಹಲವು ಕಲೆಗಳಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಪ್ರಣವ್‍ ಅವರು ರಜನಿಕಾಂತ್‍ ಅವರ ದೊಡ್ಡ ಅಭಿಮಾನಿಯಂತೆ. ಈ […]

ವಿಶಿಷ್ಟ ಅಭಿಮಾನಿಯ ಪಾದ ಮುಟ್ಟಿದ ಸೂಪರ್‌ ಸ್ಟಾರ್‌ ರಜನಿಕಾಂತ್‌ Read More »

ಕನ್ನಡ ಚಲನಚಿತ್ರವೊಂದರಲ್ಲಿ ನಟಿಸಲು ಬಯಸುವವರಿಗೆ ಸುವರ್ಣಾವಕಾಶ: ಮೈಸೂರಿನಲ್ಲಿ ನಡೆಯಲಿದೆ ಆಡಿಷನ್

ಮೈಸೂರು: ಕನ್ನಡ ಚಲನಚಿತ್ರದಲ್ಲಿ ನಟಿಸಲು ಬಯಸುವವರಿಗೆ ಸುವರ್ಣಾವಕಾಶವೊಂದು ಇದ್ದು BISFF ಮತ್ತು ಸೈಮಾ(SIIMA) ಪ್ರಶಸ್ತಿ ವಿಜೇತ ಚಿತ್ರತಂಡದ ಹೊಸ ಸಿನಿಮಾದಲ್ಲಿ ನಟಿಸಲು ಮೈಸೂರಿನಲ್ಲಿ ಆಡಿಷನ್ ನಡೆಯಲಿದೆ. ಚಿತ್ರದಲ್ಲಿ ಸಪೋರ್ಟಿಂಗ್ ಆ್ಯಕ್ಟರ್(Supporting Actors) ಸಪೋರ್ಟಿಂಗ್ ಕ್ರೀವ್(Supporting Crew) ಗಳು ಅಗತ್ಯವಿದ್ದು ಆಸಕ್ತಿಯುಳ್ಳವರು ಭಾಗವಹಿಸಬಹುದಾಗಿದೆ. ಚಿತ್ರತಂಡಕ್ಕೆ 16 ರಿಂದ 20 ವರ್ಷದೊಳಗಿನ Supporting Actors ಮತ್ತು Supporting Crew ಬೇಕಾಗಿದ್ದು ಇದೇ ಭಾನುವಾರ(Nov 17) ಮೈಸೂರಿನ ಬೋಗಾದಿಯ ಮುಖ್ಯ ರಸ್ತೆಯಲ್ಲಿರುವ ದ್ವನ್ಯಲೋಕದಲ್ಲಿ(Dhvanyaloka Centre for Indian Studies) ಆಡಿಷನ್ ನಡೆಯಲಿದೆ.

ಕನ್ನಡ ಚಲನಚಿತ್ರವೊಂದರಲ್ಲಿ ನಟಿಸಲು ಬಯಸುವವರಿಗೆ ಸುವರ್ಣಾವಕಾಶ: ಮೈಸೂರಿನಲ್ಲಿ ನಡೆಯಲಿದೆ ಆಡಿಷನ್ Read More »

ಹೊಸ ಪ್ರತಿಭೆಗಳ ‘ಲುಂಗಿ’ ಚಿತ್ರವನ್ನ ನೀವು ಒಮ್ಮೆ ನೋಡಲೇಬೇಕು..!

ಸಿನಿಮಾ: ಬಹುತೇಕ ಹೊಸ ಪ್ರತಿಭೆಗಳಿಂದ ಮೂಡಿಬಂದಿರುವ “ಲುಂಗಿ’ ಚಿತ್ರ ಈ ವಾರ ತೆರೆಗೆ ಬಂದಿದ್ದು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನಿರ್ದೇಶಕರಾದ ಅರ್ಜುನ್‌ ಲೂವಿಸ್ ಮತ್ತು ಅಕ್ಷಿತ್ ಶೆಟ್ಟಿ ಚೊಚ್ಚಲ ಪ್ರಯತ್ನದಲ್ಲೇ ತುಂಬ ಸರಳವಾದ ಕಥೆಯನ್ನು ಆಯ್ದುಕೊಂಡಿದ್ದಾರೆ. ಅದನ್ನು ಅಷ್ಟೇ ಸರಳ, ಸುಂದರವಾಗಿ ತೆರೆಗೆ ತಂದಿದ್ದಾರೆ. ಚಿತ್ರಕಥೆಯಲ್ಲಿ ಗಮನಾರ್ಹವಾದ ತಿರುವುಗಳಿಲ್ಲ. ಆದರೆ, ನೋಡಿಸಿಕೊಂಡು ಹೋಗುವ ಗುಣ ಸಿನಿಮಾಕ್ಕಿದೆ. ಸಂಪೂರ್ಣ ಮಂಗಳೂರು ಕನ್ನಡವನ್ನೇ ಪ್ರಧಾನವಾಗಿರಿಸಿಕೊಂಡು ಬರೆದಿರುವ ಸಂಭಾಷಣೆ ‘ಲುಂಗಿ’ ಚಿತ್ರದ ಮತ್ತೊಂದು ಹೈಲೈಟ್‌. ಕಾಡು, ಮರಗಳ ನಡುವೆ ಅಲ್ಲಲ್ಲಿ

ಹೊಸ ಪ್ರತಿಭೆಗಳ ‘ಲುಂಗಿ’ ಚಿತ್ರವನ್ನ ನೀವು ಒಮ್ಮೆ ನೋಡಲೇಬೇಕು..! Read More »

100ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಟಾರ್ ಡೈರೆಕ್ಟರ್ ನಿಧನ

ಹೈದರಾಬಾದ್: ತೆಲುಗಿನ ಅರುಂಧತಿ ಚಿತ್ರದ ಪ್ರಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ(64) ಇಂದು ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದಾಗಿ ನಿನ್ನೆ ಮುಂಜಾನೆ ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ. ಅರುಂಧತಿ, ನಾಗರಹಾವು(2016), ಅಂಜಿ, ಅವತಾರಂ ರೀತಿಯ ಅದ್ಭುತ ಸಿನಿಮಾಗಳನ್ನ ಕೋಡಿ ರಾಮಕೃಷ್ಣ ಅವರು ನಿರ್ದೇಶಿಸಿದ್ದರು. ಸುಮಾರು 100ಕ್ಕೂ ಅಧಿಕ ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತಿ ಗಳಿಸಿರುವ ಕೋಡಿ ರಾಮಕೃಷ್ಣ ಅವರು ಕನ್ನಡದಲ್ಲಿ 2016ರಲ್ಲಿ ತೆರೆಕಂಡ ಡಾ.ವಿಷ್ಣುವರ್ಧನ್

100ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಟಾರ್ ಡೈರೆಕ್ಟರ್ ನಿಧನ Read More »

ಒಂದು ಕಥೆ ಹೇಳ್ಲಾ

ಬಿಡುಗಡೆಯಾಯ್ತು ಐದು ಹಾರರ್ ಕಥೆಗಳ ಟ್ರೈಲರ್..!

ಬೆಂಗಳೂರು: ಜೋಡಿಹಕ್ಕಿ ಸೀರಿಯಲ್ ಮೂಲಕ ರಾಮಣ್ಣ ಎಂದೇ ಖ್ಯಾತರಾಗಿರುವವರು ತಾಂಡವ್. ಅವರೀಗ ಒಂದು ಕಥೆ ಹೇಳ್ಲಾ ಎಂಬ ವಿನೂತನ ಪ್ರಯೋಗದ ಹಾರರ್ ಚಿತ್ರವೊಂದರ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಹೊಸ ಥರದ ಪೋಸ್ಟರ್ ಸೇರಿದಂತೆ ನಾನಾ ರೀತಿಯಲ್ಲಿ ಈ ಸಿನಿಮಾ ಸುದ್ದಿ ಕೇಂದ್ರದಲ್ಲಿದೆ. ಇದೀಗ ಇದರ ಟ್ರೈಲರ್ ಹೊರ ಬಂದಿದೆ. ಇದುವೇ ಕ್ಷಣ ಕ್ಷಣವೂ ಬೆಚ್ಚಿ ಬೆರಗಾಗಿಸುವಂಥಾ ಡಿಫರೆಂಟಾದ ಕಂಟೆಂಟು ಈ ಚಿತ್ರದಲ್ಲಿದೆ ಎಂಬಂಥಾ ಸುಳಿವನ್ನೂ ಬಿಟ್ಟುಕೊಟ್ಟಿದೆ. ಕ್ರೌಡ್ ಫಂಡಿಂಗ್ ಮೂಲಕ ನಿರ್ಮಾಣಗೊಂಡಿರೋ ಈ ಚಿತ್ರವನ್ನು ಗಿರೀಶ್

ಬಿಡುಗಡೆಯಾಯ್ತು ಐದು ಹಾರರ್ ಕಥೆಗಳ ಟ್ರೈಲರ್..! Read More »

Scroll to Top