80ರ ದಶಕದ ಜನಪ್ರಿಯ ಧಾರಾವಾಹಿ ‘ರಾಮಾಯಣ’ ಇಂದಿನಿಂದ ಮರುಪ್ರಸಾರ
ನವದೆಹಲಿ: ದೂರದರ್ಶನದಲ್ಲಿ 80ರ ದಶಕದಲ್ಲಿ ಪ್ರಸಾರವಾಗುತ್ತಿದ್ದ, ಜನಪ್ರಿಯ ಧಾರಾವಾಹಿ ‘ರಾಮಾಯಣ’ ಇಂದಿನಿಂದ(ಮಾ. 28ರಿಂದ) ಮರುಪ್ರಸಾರವಾಗಲಿದೆ. ಕೊರೊನಾ ಭೀತಿಯಿಂದ ದೇಶಾದ್ಯಂತ ಲಾಕ್ ಡೌನ್ನಿಂದಾಗಿ ಜನರು ಮನೆಯಲ್ಲಿಯೇ ಕುಳಿತು ಏನು ಮಾಡುವುದೆಂಬ ಚಿಂತೆಯಲ್ಲಿದ್ದಾರೆ. ಈಗ ಜನರ ಮನರಂಜನೆಗಾಗಿ ದೂರದರ್ಶನದಲ್ಲಿ ಜನಪ್ರಿಯ ‘ರಾಮಾಯಣ’ ಧಾರವಾಹಿಯನ್ನು ಮತ್ತೆ ಪ್ರಾರಂಭಿಸಲು ನಿನ್ನೆಯಷ್ಟೇ ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಹಾಗಾಗಿ, ಇಂದಿನಿಂದಲೇ ಜನರು ಮನೆಯಲ್ಲಿ ಕುಳಿತು ರಾಮಾಯಣವನ್ನು ವೀಕ್ಷಿಸಬಹುದು. ದಿನಕ್ಕೆ 2 ಬಾರಿಯಂತೆ ‘ರಾಮಾಯಣ’ ಧಾರಾವಾಹಿ ಪ್ರಸಾರವಾಗಲಿದೆ. ಮುಂಜಾನೆ 9.00ಗಂಟೆಗೆ ಹಾಗೂ ರಾತ್ರಿ 9.00 ಗಂಟೆಗೆ ಪ್ರಸಾರವಾಗಲಿದೆ. […]
80ರ ದಶಕದ ಜನಪ್ರಿಯ ಧಾರಾವಾಹಿ ‘ರಾಮಾಯಣ’ ಇಂದಿನಿಂದ ಮರುಪ್ರಸಾರ Read More »