Dharmasthala

ಅಭಿಷೇಕಕ್ಕೂ ನೀರಿಲ್ಲ ಎಂದಿದ್ದ ಧರ್ಮಸ್ಥಳದಲ್ಲಿ ತುಂಬಿ ಹರಿಯುತ್ತಿದೆ ನೇತ್ರಾವತಿ ನದಿ

ಧರ್ಮಸ್ಥಳ: ಬರದಿಂದ ಕಂಗೆಟ್ಟಿದ್ದ ಕರಾವಳಿಯಲ್ಲಿ ಭಾಗಗಳಲ್ಲಿ ವಾಯು ಚಂಡಮಾರುತದ ಪರಿಣಾಮವಾಗಿ ಮಳೆಯ ಅಬ್ಬರ ಜೋರಾಗಿದ್ದು, ಬತ್ತಿ ಹೋಗಿದ್ದ ನೇತ್ರಾವತಿಗೆ ನೀರು ಬಂದಿದೆ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ನೇತ್ರಾವತಿ ನದಿಯಲ್ಲಿ ನೀರಿಲ್ಲ. ಮುಂದಿನ 15 ದಿನಗಳಲ್ಲಿ ಮಳೆ ಬರದಿದ್ದರೆ ಮಂಜುನಾಥ ಸ್ವಾಮಿಯ ಅಭಿಷೇಕಕ್ಕೂ ನೀರಿರುವುದಿಲ್ಲ ಎಂದಿದ್ದ ಧರ್ಮಸ್ಥಳದಲ್ಲೀಗ ನೇತ್ರಾವತಿ ಒಡಲು ತುಂಬಿ ಹರಿಯುತ್ತಿದ್ದು, ಸಮಸ್ಯೆ ಬಗೆಹರಿದಿದೆ. ಬೆಳ್ತಂಗಡಿ ತಾಲೂಕಿನಲ್ಲಿ ನೇತ್ರಾವತಿ ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಸ್ನಾನಘಟ್ಟದಲ್ಲಿ ನೀರು ಹರಿಯುತ್ತಿರುವುದು ಭಕ್ತರ ಸಂತಸಕ್ಕೆ ಕಾರಣವಾಗಿದೆ. ನೇತ್ರಾವತಿಯಲ್ಲಿ […]

ಅಭಿಷೇಕಕ್ಕೂ ನೀರಿಲ್ಲ ಎಂದಿದ್ದ ಧರ್ಮಸ್ಥಳದಲ್ಲಿ ತುಂಬಿ ಹರಿಯುತ್ತಿದೆ ನೇತ್ರಾವತಿ ನದಿ Read More »

ಧರ್ಮಸ್ಥಳ ಪ್ರವಾಸ ಮುಂದೂಡಲು ಯಾತ್ರಾರ್ಥಿಗಳಿಗೆ ಮನವಿ ಮಾಡಿದ ಡಾ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ: ಬೇಸಿಗೆಯ ಬಿಸಿಲಿನ ತೀವ್ರತೆಯಿಂದಾಗಿ ಧರ್ಮಸ್ಥಳ ಕ್ಷೇತ್ರದಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು, ಕ್ಷೇತ್ರಕ್ಕೆ ಬರುವವರು ಕೆಲವು ದಿನ ಬಿಟ್ಟು ಬರಲು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದ್ದು, ಬೇಸಿಗೆಯ ತೀವ್ರತೆಗೆ ದೇಶಾದ್ಯಂತ ನೀರಿನ ಅಭಾವವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ನೀರಿಗಾಗಿ ಜನರು ತುಂಬಾ ಕಷ್ಟಪಡುತ್ತಿದ್ದಾರೆ. ಒಂದೆಡೆ ಜಿಲ್ಲೆಯಲ್ಲಿ ರೇಶನ್ ಮೂಲಕ ಜಿಲ್ಲಾಡಳಿತವು ನೀರನ್ನು ಪೂರೈಸುತ್ತಿದ್ದು, ವಾರಕ್ಕೆ ಎರಡು – ಮೂರು ದಿನಕ್ಕೊಮ್ಮೆ‌

ಧರ್ಮಸ್ಥಳ ಪ್ರವಾಸ ಮುಂದೂಡಲು ಯಾತ್ರಾರ್ಥಿಗಳಿಗೆ ಮನವಿ ಮಾಡಿದ ಡಾ. ವೀರೇಂದ್ರ ಹೆಗ್ಗಡೆ Read More »

ಮಹಾಮಸ್ತಕಾಭಿಷೇಕ

ಇಂದಿನಿಂದ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ ಸಂಭ್ರಮ

ಬೆಳ್ತಂಗಡಿ: ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಫೆ. 9ರಿಂದ 18ರ ವರೆಗೆ ಮಹಾಮಸ್ತಕಾಭಿಷೇಕ ದ ಸಂಭ್ರಮ. ಮಹಾನ್ ವಿರಾಗಿ ಬಾಹುಬಲಿಗೆ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಜ್ಜನಕ್ಕೆ ಮಂಜುನಾಥನ ಕ್ಷೇತ್ರ ಸಜ್ಜಾಗಿದೆ. ಧರ್ಮಸ್ಥಳದ ರತ್ನಗಿರಿಯಲ್ಲಿ ಫೆ.9ರಿಂದ 18ರ ವರೆಗೆ ಸಂತ ಸಮ್ಮೇಳನ ಸೇರಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬಾಹುಬಲಿಯ ಪ್ರತಿಷ್ಠಾಪಕರಾಗಿರುವ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ.ಹೆಗ್ಗಡೆಯವರ ನೇತೃತ್ವದಲ್ಲಿ ಮಹಾಮಸ್ತಕಾಭಿಷೇಕದ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಮಹಾಮಜ್ಜನದ ಭಾಗವಾಗಿ ವಿವಿಧ ಜನಮಂಗಲ, ಜನಕಲ್ಯಾಣ ಕಾರ್ಯಕ್ರಮಗಳು ನಾಡಿಗೆ ಸಮರ್ಪಿತವಾಗಲಿವೆ.

ಇಂದಿನಿಂದ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ ಸಂಭ್ರಮ Read More »

Scroll to Top