ಶೀಘ್ರದಲ್ಲೇ ಇತಿಹಾಸದ ಪುಟ ಸೇರಲಿದೆ ದೂರದರ್ಶನ ವಾಹಿನಿಯ ಲೋಗೋ: ಸ್ಪರ್ಧೆಯಲ್ಲಿ ಗೆದ್ದ ಈ 5ರಲ್ಲಿ ಒಂದು ಮುಂದಿನ ಲೋಗೋ
ನವದೆಹಲಿ: 70ರ ದಶಕದಲ್ಲಿ ಪ್ರತಿ ಮನೆಯಲ್ಲೂ ಮನರಂಜನೆಯನ್ನು ಉಣಬಡಿಸ್ತಾ ಇದ್ದ ಏಕೈಕ ವಾಹಿನಿ ದೂರದರ್ಶನ. ಎಲ್ಲರ ನೆಚ್ಚಿನ ದೂರದರ್ಶನ ವಾಹಿನಿಯ ಐಕಾನಿಕ್ ಲೋಗೋ ಶೀಘ್ರದಲ್ಲೇ ಇತಿಹಾಸದ ಪುಟ ಸೇರಲಿದೆ. ಏಕೆಂದರೆ ಡಿಡಿ ವಾಹಿನಿಯು ತನ್ನ ನೆಟ್ವರ್ಕ್ ಆಧುನೀಕರಿಸಲು ಮುಂದಾಗಿದ್ದು, ಲೋಗೋ ಬದಲಾವಣೆಗೆ ನಿರ್ಧರಿಸಿದೆ. ಹೊಸ ಲೋಗೋ ವಿನ್ಯಾಸಕ್ಕೆ 2017ರ ಜುಲೈನಿಂದ ಆಗಸ್ಟ್ವರೆಗೆ ಕಾಂಟೆಸ್ಟ್ ನಡೆಸಲಾಗಿತ್ತು. ಇದಕ್ಕೆ ಸುಮಾರು 10,000ಕ್ಕೂ ಹೆಚ್ಚು ಎಂಟ್ರಿಗಳು ಬಂದಿದ್ದು ಅದರಲ್ಲಿ ಐದು ಲೋಗೋಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಪೈಕಿ ಒಂದನ್ನು […]