Double Decker Bus

ಮೈಸೂರಿಗರಿಗೆ ಖುಷಿಯ ವಿಚಾರ. ರಸ್ತೆಗಿಳಿಯಲು ಸಿದ್ಧವಾಗಿದೆ ಡಬಲ್ ಡೆಕ್ಕರ್ ಬಸ್!

ಮೈಸೂರು: ಮೈಸೂರು ಪ್ರವಾಸಿಗರಿಗೆ ಖುಷಿಯ ವಿಚಾರ. ಮೈಸೂರು ಪ್ರವಾಸಿತಾಣಗಳನ್ನು ಇನ್ಮುಂದೆ ಡಬಲ್‌ ಡೆಕ್ಕರ್‌ ಬಸ್‌ ನಲ್ಲಿ ಕುಳಿತು ವೀಕ್ಷಣೆ ಮಾಡಬಹುದು. ಹೌದು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ಪ್ರವಾಸಿ ತಾಣಗಳನ್ನು ಡಬಲ್‌ ಡೆಕ್ಕರ್‌ ಬಸ್‌ನಲ್ಲಿ ಕುಳಿತು ವೀಕ್ಷಿಸುವ ಮೈಸೂರಿಗರ ಬಹುದಿನಗಳ ಕನಸು ಮಾರ್ಚ್‌ ಅಂತ್ಯದ ವೇಳೆಗೆ ಈಡೇರಲಿದೆ. ವಿಶ್ವ ಪ್ರಸಿದ್ಧ ಪ್ರವಾಸಿತಾಣಗಳಾದ ಮೈಸೂರು ಹಾಗೂ ಹಂಪಿಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು, ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಡಬಲ್‌ ಡೆಕ್ಕರ್‌ ಬಸ್‌ಗಳನ್ನು ಪರಿಚುಸಲು ಯೋಜನೆ ರೂಪಿಸಿತ್ತು. […]

ಮೈಸೂರಿಗರಿಗೆ ಖುಷಿಯ ವಿಚಾರ. ರಸ್ತೆಗಿಳಿಯಲು ಸಿದ್ಧವಾಗಿದೆ ಡಬಲ್ ಡೆಕ್ಕರ್ ಬಸ್! Read More »

ಡಬಲ್ ಡೆಕ್ಕರ್

ರಾಜ್ಯ ಬಜೆಟ್: ಮೈಸೂರಿಗೆ ಲಂಡನ್ ಮಾದರಿಯ ಡಬಲ್ ಡೆಕ್ಕರ್ ಬಸ್ ಸೇವೆ

ಬೆಂಗಳೂರು: ವಿಶ್ವ ವಿಖ್ಯಾತ ಮೈಸೂರಿನ ಪ್ರವಾಸಿ ತಾಣಗಳನ್ನು ಇನ್ನು ಮುಂದೆ ಡಬಲ್ ಡೆಕ್ಕರ್ ಬಸ್ಸಿನಲ್ಲಿ ವೀಕ್ಷಣೆ ಮಾಡಬಹುದು. ಸಿಎಂ ಇಂದು ಮಂಡಿಸಿದ ಬಜೆಟ್ ನಲ್ಲಿ 6 ಡಬಲ್ ಡೆಕ್ಕರ್ ತೆರೆದ ಬಸ್ ಸೇವೆ ಆರಂಭಿಸಲು 5 ಕೋಟಿ ರೂ. ಅನುದಾನವನ್ನು ಘೋಷಿಸಿದ್ದಾರೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‍ಟಿಡಿಸಿ) ವತಿಯಿಂದ ಮೈಸೂರಿನಲ್ಲಿ ಲಂಡನ್ ಬಿಗ್ ಬಸ್ ಮಾದರಿಯ 6 ಡಬಲ್ ಡೆಕ್ಕರ್ ತೆರೆದ ಬಸ್ ಸೇವೆ ಆರಂಭಿಸಲು 5 ಕೋಟಿ ರೂ. ಅನುದಾನವನ್ನು ಸಿಎಂ ಬಜೆಟ್ ನಲ್ಲಿ ಘೋಷಿಸಿದ್ದಾರೆ.

ರಾಜ್ಯ ಬಜೆಟ್: ಮೈಸೂರಿಗೆ ಲಂಡನ್ ಮಾದರಿಯ ಡಬಲ್ ಡೆಕ್ಕರ್ ಬಸ್ ಸೇವೆ Read More »

Scroll to Top