Indian army

ವಿಶೇಷ ಆರ್ಮಿ ಕ್ಯಾಪ್ ಧರಿಸಿ ರಾಂಚಿಯಲ್ಲಿ ಕಣಕ್ಕಿಳಿದ ಟೀಂ ಇಂಡಿಯಾ

ರಾಂಚಿ: ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೇನಾ ಕ್ಯಾಪ್ ಧರಿಸಿ ಕಣಕ್ಕಿಳಿಯುವ ಮೂಲಕ ಪುಲ್ವಾಮಾದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಗೌರವ ಸೂಚಿಸಿದೆ. ಟಾಸ್’ಗೂ ಮುನ್ನ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಂಡದ ಎಲ್ಲಾ ಆಟಗಾರರಿಗೆ ಕ್ಯಾಪ್ ನೀಡಿದರು. ಪುಲ್ವಾಮಾ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಸೈನಿಕರಿಗೆ ಗೌರವ ನೀಡಲು ವಿಶೇಷವಾಗಿ ಭಾರತದ ಸೇನೆಗೆ ಬೆಂಬಲ ಸೂಚಿಸುವ ಉದ್ದೇಶದಿಂದ ಕ್ಯಾಫ್ ಧರಿಸಲಾಗಿದೆ. ಪಂದ್ಯದಲ್ಲಿ ವಿಶೇಷ ಕ್ಯಾಪ್ ಧರಿಸಿ ಆಡುವುದು ಮಾತ್ರವಲ್ಲದೇ ಯೋಧರ ಮಕ್ಕಳ […]

ವಿಶೇಷ ಆರ್ಮಿ ಕ್ಯಾಪ್ ಧರಿಸಿ ರಾಂಚಿಯಲ್ಲಿ ಕಣಕ್ಕಿಳಿದ ಟೀಂ ಇಂಡಿಯಾ Read More »

ಪಾಕ್ ಗಡಿಯೊಳಗೆ ವಾಯುಪಡೆ ಸರ್ಜಿಕಲ್ ದಾಳಿ: ವಿಡಿಯೋ ನೋಡಿ

ನವದೆಹಲಿ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತೀಯ ವಾಯುಪಡೆಯ 12 ಮಿರೇಜ್‌ ಜೆಟ್‌ ಯುದ್ಧ ವಿಮಾನಗಳು ಗಡಿ ನಿಯಂತ್ರಣ ರೇಖೆಯ ಬಳಿಯ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗಿದ್ದು, ಸಂಪೂರ್ಣ ನಾಶ ಪಡಿಸಲಾಗಿದೆ. ಜೈಷ್‌ ಇ ಮೊಹಮ್ಮದ್‌ ಉಗ್ರ ಸಂಘಟನೆಯ ಅಡಗುತಾಣಗಳ ಮೇಲೆ ಮುಂಜಾನೆ 3.30ರ ವೇಳೆಗೆ ನಡೆಸಿದ ದಾಳಿಯಲ್ಲಿ 1000 ಕೆ.ಜಿ ಬಾಂಬ್ ಹಾಕಿ ಅಡಗುತಾಣಗಳನ್ನು ಸಂಪೂರ್ಣ ಧ್ವಂಸಗೊಳಿಸಲಾಗಿದೆ.

ಪಾಕ್ ಗಡಿಯೊಳಗೆ ವಾಯುಪಡೆ ಸರ್ಜಿಕಲ್ ದಾಳಿ: ವಿಡಿಯೋ ನೋಡಿ Read More »

ನಂಬಿಕಸ್ಥ ರಾಷ್ಟ್ರಗಳ ಪಟ್ಟಿಯಿಂದ ನಂಬಿಕೆದ್ರೋಹಿ ಪಾಕಿಸ್ತಾನವನ್ನು ಕಿತ್ತೆಸೆದ ಭಾರತ

ನಂಬಿಕಸ್ಥ ರಾಷ್ಟ್ರಗಳ ಪಟ್ಟಿಯಿಂದ ನಂಬಿಕೆದ್ರೋಹಿ ಪಾಕಿಸ್ತಾನವನ್ನು ಕಿತ್ತೆಸೆದ ಭಾರತ

ನವದೆಹಲಿ: ಜಮ್ಮು-ಕಾಶ್ಮೀರ ಪುಲ್ವಾಮದಲ್ಲಿ ನಿನ್ನೆ ಸೇನಾ ವಾಹನದ ಮೇಲೆ ಬಾಂಬ್ ಸ್ಫೋಟಿಸಿ ಯೋಧರನ್ನು ಹತ್ಯೆಗೈದ ಘಟನೆ ಹಿನ್ನೆಲೆಯಲ್ಲಿ ಅತ್ಯಂತ ನಂಬಿಕಸ್ಥ ರಾಷ್ಟ್ರಗಳ ಪಟ್ಟಿಯಿಂದ ಪಾಕಿಸ್ತಾನವನ್ನು ಹೊರಗಿಡಲಾಗಿದೆ. ಪಾಕ್ ಕೃಪಾಪೋಷಿತ ಜೈಶೆ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಅಟ್ಟಹಾಸಕ್ಕೆ ಇಡೀ ಭಾರತವೇ ಅಕ್ಷರಶಃ ಕೆಂಡ ಕಾರುತ್ತಿರುವ ಈ ವೇಳೆ, 1996ರಲ್ಲಿ ಪಾಕಿಸ್ತಾನಕ್ಕೆ ನೀಡಲಾಗಿದ್ದ ಪರಮಾಪ್ತ ರಾಷ್ಟ್ರದ ಸ್ಥಾನಮಾನವನ್ನು ಹಿಂತೆಗೆದುಕೊಂಡು, ಜಾಗತಿಕ ವೇದಿಕೆಗಳಲ್ಲಿ ಇಸ್ಲಾಮಾಬಾದನ್ನು ಇನ್ನಷ್ಟು ಮೂಲೆಗುಂಪು ಮಾಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ

ನಂಬಿಕಸ್ಥ ರಾಷ್ಟ್ರಗಳ ಪಟ್ಟಿಯಿಂದ ನಂಬಿಕೆದ್ರೋಹಿ ಪಾಕಿಸ್ತಾನವನ್ನು ಕಿತ್ತೆಸೆದ ಭಾರತ Read More »

ಜಮ್ಮು

ಉಗ್ರರ ದಾಳಿಗೆ 20ಕ್ಕೂ ಹೆಚ್ಚು ಸಿಆರ್‌ಪಿಎಫ್ ಯೋಧರು ಹುತಾತ್ಮ..!

ಜಮ್ಮು-ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ 20 ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಗೋರಿಪೋರ ಪ್ರದೇಶದಲ್ಲಿ ಉಗ್ರರು ಸುಧಾರಿತ ಸ್ಫೋಟಕ ಬಳಸಿ ಸಿಆರ್‌ಪಿಎಫ್‌ ಯೋಧರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಹಲವು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ಬಳಿಕ ಸ್ಥಳದಲ್ಲಿ ಗುಂಡಿನ ದಾಳಿ ಕೂಡ ನಡೆದಿದೆ. ಶ್ರೀನಗರ – ಜಮ್ಮು ಹೆದ್ದಾರಿಯಲ್ಲಿ ನಿಂತಿದ್ದ ಆಟೋರಿಕ್ಷಾಕ್ಕೆ ಸುಧಾರಿತ ಸ್ಫೋಟಕ ಅಳವಡಿಸಿ, ಸಿಆರ್‌ಪಿಎಫ್‌ ಯೋಧರಿದ್ದ ವಾಹನದ ಮೇಲೆ

ಉಗ್ರರ ದಾಳಿಗೆ 20ಕ್ಕೂ ಹೆಚ್ಚು ಸಿಆರ್‌ಪಿಎಫ್ ಯೋಧರು ಹುತಾತ್ಮ..! Read More »

Scroll to Top