ಜ್ವರದಿಂದ ಮೃತಪಟ್ಟ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆನೆ
ಉಡುಪಿ: ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಸೇರಿದ ಇಂದಿರಾ ಎಂಬ 62 ವರ್ಷದ ಆನೆ ಜ್ವರದಿಂದ ನಿನ್ನೆ ಮೃತಪಟ್ಟಿದೆ. ಕಳೆದ 20 ದಿನಗಳಿಂದ ಆನೆ ಜ್ವರದಿಂದ ಬಳಲುತ್ತಿತ್ತು ಎಂದು ತಿಳಿದುಬಂದಿದೆ. ಕಳೆದ 22 ವರ್ಷಗಳಿಂದ ದೇವಸ್ತಾನದ ಸೇವೆ ಸಲ್ಲಿಸುತ್ತಿದ್ದ ಇಂದಿರಾ ನಿಧನಕ್ಕೆ ಭಕ್ತರು ಕಂಬನಿ ಮೀಡಿದಿದ್ದಾರೆ. ಈ ಆನೆ ಕೊಲ್ಲೂರು ದೇವಸ್ತಾನಕ್ಕೆ ಕಟ್ಟಿಗೆ ಮಾರಾಟಗಾರನಿಂದ ಕೊಡುಗೆ ರೂಪದಲ್ಲಿ ಬಂದಿತ್ತು ಎನ್ನಲಾಗಿದೆ.
ಜ್ವರದಿಂದ ಮೃತಪಟ್ಟ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆನೆ Read More »