ಮರಳಲ್ಲಿ ಅರಳಿತು ವಿಶ್ವ ಪಾರಂಪರಿಕ ತಾಣ ಕೊನಾರ್ಕ್ ದೇವಾಲಯ: ಜಪಾನ್ನಲ್ಲಿ ಈ ಅದ್ಭುತ ಕಲೆಯ ಪ್ರದರ್ಶನ
ನವದೆಹಲಿ: ಪದ್ಮಶ್ರೀ ಪುರಸ್ಕೃತ ಸುದರ್ಶನ್, ಇತಿಹಾಸಪ್ರಸಿದ್ಧ ಕೊನಾರ್ಕ್ ದೇವಾಲಯ ದ ಚಕ್ರವನ್ನ ಮರಳಿನಲ್ಲಿ ರಚಿಸಿದ್ದಾರೆ. ಈ ಅದ್ಭುತ ಕಲೆಯ ಫೋಟೋಗಳನ್ನ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಸ್ಯಾಂಡ್ ಆರ್ಟ್ ಎಂದಾಕ್ಷಣ ಥಟ್ ಅಂತ ನೆನಪಾಗೋದೇ ಸುದರ್ಶನ್ ಪಟ್ನಾಯಕ್. ಒಡಿಶಾ ಮೂಲದವರಾದ ಖ್ಯಾತ ಕಲಾವಿದ ಸುದರ್ಶನ್, ಸದ್ಯ ಜಪಾನ್ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮರಳು ಕಲೆ ಪ್ರದರ್ಶನದಲ್ಲಿ ತಮ್ಮ ಪ್ರತಿಭೆಯನ್ನೂ ತೋರಿಸಿದ್ದು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಕೊನಾರ್ಕ್ನ ಸೂರ್ಯ ದೇವಾಲಯದ ಸ್ಯಾಂಡ್ ಆರ್ಟ್ ಮಾಡಿದ್ದಾರೆ. ಜಪಾನ್ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಮರಳು […]