Leopard

ಗ್ರಾಮಕ್ಕೆ ನುಗ್ಗಿದ ಚಿರತೆಯನ್ನು ಹಿಡಿದು ಕಟ್ಟಿ ಹಾಕಿದ ಗ್ರಾಮಸ್ಥರು..!

ಹುಣಸೂರು: ಗ್ರಾಮಕ್ಕೆ ನುಗ್ಗಿದ ಚಿರತೆ ಮರಿಯೊಂದನ್ನು ಹಿಡಿದು ಕಟ್ಟಿ ಹಾಕಿದ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ರಾಮಪಟ್ಟಣ ಗ್ರಾಮದಲ್ಲಿ ನಡೆದಿದೆ. ಕಾಡಂಚಿನ ಗ್ರಾಮವಾದ ರಾಮಪಟ್ಟಣಕ್ಕೆ 5ತಿಂಗಳ ಮರಿ ಚಿರತೆಯೊಂದು ನುಗ್ಗಿ ಜೋಳದ ಜಮೀನಿನಲ್ಲಿ ಅವಿತು ಕುಳಿತಿತ್ತು. ಚಿರತೆಯನ್ನು ನೋಡಿದ ಕೂಲಿ ಕಾರ್ಮಿಕರು ಗ್ರಾಮಸ್ಥರಿಗೆ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಮಿಸಿದ ಗ್ರಾಮಸ್ಥರು ಜಮೀನಿನಲ್ಲಿ ಹುಡುಕಾಟ ನಡೆಸಿ ಚಿರತೆ ಹಿಡಿದು ಕಟ್ಟಿ ಹಾಕಿದ್ದಾರೆ. ಅಲ್ಲದೇ ಸೆರೆ ಹಿಡಿದ ಚಿರತೆಯನ್ನು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಗ್ರಾಮಕ್ಕೆ ನುಗ್ಗಿದ ಚಿರತೆಯನ್ನು ಹಿಡಿದು ಕಟ್ಟಿ ಹಾಕಿದ ಗ್ರಾಮಸ್ಥರು..! Read More »

ಆಹಾರ ಅರಸಿ ನಾಡಿಗೆ ಬಂದ ಚಿರತೆ ವಿದ್ಯುತ್ ಸ್ಪರ್ಶಕ್ಕೆ ಬಲಿ

ಮೈಸೂರು: ಆಹಾರ ಹುಡುಕಿಕೊಂಡ ನಾಡಿಗೆ ಬಂದಿದ್ದ ಹೆಣ್ಣು ಚಿರತೆಯೊಂದು ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಜಿಯಾರ ಗ್ರಾಮದ ಬಳಿ ನಡೆದಿದೆ. ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬರುವ ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗೆ ನಾಡಿಗೆ ಬಂದ ಕಾಡು ಪ್ರಾಣಿಗಳು ಜನರಿಗೆ ತೊಂದರೆ ಕೊಡುವುದರ ಜೊತೆಗೆ ತಾವು ತೊಂದರೆಗೆ ಸಿಲುಕುತ್ತಿವೆ. ಆಹಾರ ಅರಸಿ ನಾಡಿಗೆ ಬಂದ 4 ವರ್ಷದ ಹೆಣ್ಣು ಚಿರತೆ ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಸಾವನ್ನಪ್ಪಿದೆ. ನಾಗರಹೊಳೆ

ಆಹಾರ ಅರಸಿ ನಾಡಿಗೆ ಬಂದ ಚಿರತೆ ವಿದ್ಯುತ್ ಸ್ಪರ್ಶಕ್ಕೆ ಬಲಿ Read More »

ನಂಜನಗೂಡಿನಲ್ಲಿ 3 ಚಿರತೆ ಸಾವು: ವಿಷ ಹಾಕಿ ಕೊಂದಿರುವ ಶಂಕೆ

ಮೈಸೂರು: ಸತ್ತ ನಾಯಿಗಳನ್ನು ತಿಂದ ಮೂರು ಚಿರತೆಗಳು ಮೃತಪಟ್ಟ ಘಟನೆ ನಂಜನಗೂಡಿನಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ಸಾರ್ವಜನಿಕ ಆಸ್ಪತ್ರೆಯ ಹಿಂಬದಿಯಲ್ಲಿರುವ ಚೆನ್ನಬಸಪ್ಪ ಎಂಬವರ ಜಮೀನಿನಲ್ಲಿ ಈ ಘಟನೆ ನಡೆದಿದೆ. ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ ಅರಣ್ಯ ವಲಯದಿಂದ ಹಲ್ಲರೆ ಗ್ರಾಮದತ್ತ ಆಗಮಿಸಿರುವ ಸುಮಾರು 10 ವರ್ಷದ ಹೆಣ್ಣು ಚಿರತೆಯ ಜೊತೆಗೆ 8 ತಿಂಗಳ, 2 ಹೆಣ್ಣು ಚಿರತೆ ಮರಿಗಳು ಸಾವನ್ನಪ್ಪಿವೆ. ಚಿರತೆ ಸತ್ತ ನಾಯಿಯನ್ನು ತಿಂದು ಸಾವನ್ನಪ್ಪಿದೆ. ನಾಯಿಗಳ ಹಾವಳಿ ತಪ್ಪಿಸಲು ಅವುಗಳಿಗೆ ವಿಷಾಹಾರ

ನಂಜನಗೂಡಿನಲ್ಲಿ 3 ಚಿರತೆ ಸಾವು: ವಿಷ ಹಾಕಿ ಕೊಂದಿರುವ ಶಂಕೆ Read More »

ಹಸು ತಿನ್ನಲು ಬಂದು ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಸಾರ್ವಜನಿಕರು

ಮೈಸೂರು: ಮೂರು ದಿನಗಳ ಹಿಂದಷ್ಟೇ ಹಸು ಮೇಲೆ ದಾಳಿ ಮಾಡಿ ಕೊಂದುಹಾಕಿದ್ದ ಚಿರತೆಯೊಂದು ಬೋನಿಗೆ ಬಿದ್ದಿರುವ ಘಟನೆ ಮೈಸೂರಿನ ಕೆ.ಸಾಲುಂಡಿ ಗ್ರಾಮದಲ್ಲಿ ನಡೆದಿದೆ. 3 ದಿನಗಳ ಹಿಂದೆ ಹಸುವಿನ ಮೇಲೆ ದಾಳಿ ಮಾಡಿ ಕೊಂದುಹಾಕಿದ್ದ ಚಿರತೆ ಗ್ರಾಮಸ್ಥರ ಆತಂಕವನ್ನುಂಟುಮಾಡಿತ್ತು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿಗಳು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾದ ಹಿನ್ನಲೆಯಲ್ಲಿ ಚಿರತೆ ಹಿಡಿಯಲೆಂದು ಬೋನು ಇರಿಸಲು ನಿರ್ಧರಿಸಿದ್ದರು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದ ಸಿಬ್ಬಂದಿಗಳು ಗ್ರಾಮದ ಚಿಕ್ಕಣ್ಣೇಗೌಡ ಎಂಬುವವರಿಗೆ ಸೇರಿದ ಜಮೀನಲ್ಲಿ ಚಿರತೆಗಾಗಿ ಬೋನು ಸಿದ್ಧಗೊಳಿ, ಅದರಲ್ಲಿ

ಹಸು ತಿನ್ನಲು ಬಂದು ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಸಾರ್ವಜನಿಕರು Read More »

Scroll to Top