Mysuru Dasara 2019

ಅರಮನೆಯ ಸ್ಟ್ರಾಂಗ್‌ರೂಮ್‌ ಸೇರಿದ ರತ್ನ ಖಚಿತ ಸಿಂಹಾಸನ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆ ನೆಲಮಾಳಿಗೆಯಿಂದ ದರ್ಬಾರ್‌ ಹಾಲ್‌ಗೆ ತಂದು ಜೋಡಿಸಲಾಗಿದ್ದ ರತ್ನ ಖಚಿತ ಸಿಂಹಾಸನವನ್ನು ಸೂಕ್ತ ಪೊಲೀಸ್‌ ಬಂದೋಬಸ್ತ್ ನಲ್ಲಿ ಸ್ಟ್ರಾಂಗ್‌ ರೂಂಗೆ ಸಾಗಿಸಲಾಗಿದೆ. ಬುಧವಾರ ರತ್ನ ಖಚಿತ ಸಿಂಹಾಸನದ ಅವರೋಹಣ ಕಾರ್ಯಕ್ರಮ ನಡೆದಿದ್ದು, ಅರಮನೆ ಕನ್ನಡಿ ತೊಟ್ಟಿಯಲ್ಲಿ ಬೆಳಿಗ್ಗೆ ಗಣಪತಿ ಹೋಮ, ಚಾಮುಂಡಿ ಪೂಜೆ, ಶಾಂತಿ ಹೋಮ ನೆರವೇರಿಸಲಾಯಿತು. ಬಳಿಕ ದರ್ಬಾರ್‌ ಹಾಲ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿ ಕಂಗೊಳಿಸುತ್ತಿದ್ದ ಸಿಂಹಾಸನ ವನ್ನು ಮೊದಲಿಗೆ 14 ಬಿಡಿ […]

ಅರಮನೆಯ ಸ್ಟ್ರಾಂಗ್‌ರೂಮ್‌ ಸೇರಿದ ರತ್ನ ಖಚಿತ ಸಿಂಹಾಸನ Read More »

ಅಕ್ಟೋಬರ್ 2 ರಂದು‌ ದಸರಾ ಏರ್ ಶೋ:ಭಾರತೀಯ ವಾಯುಪಡೆಯ ಸಾಹಸವನ್ನು ನೀವು ಕಣ್ತುಂಬಿಕೊಳ್ಳಿ

ಮೈಸೂರು: ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಇಂಡಿಯನ್ ಏರ್ ಫೋರ್ಸ್ ‌ಸಹಯೋಗದಲ್ಲಿ ಏರ್ ಶೋ ಆಯೋಜಿಸಲಾಗಿದ್ದು, ನಗರದ ಬನ್ನಿಮಂಟಪ ಮೈದಾನದಲ್ಲಿ ಅಕ್ಟೋಬರ್ 2 ರಂದು‌ ಬೆಳಿಗ್ಗೆ 11.30 ಕ್ಕೆ ಏರ್ ಶೋ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಮಾಹಿತಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳ‌ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ‌ಮಾತನಾಡಿದ ಅವರು ನಗರದಲ್ಲಿ ‌ಏರ್ ಶೋ ನಡೆಸಲು ಸಕಲ ಸಿದ್ದತೆ ಮಾಡಿಕೊಂಡಿದ್ದು, ವೀಕ್ಷಕರು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಬರಬೇಕು ಎಂದು ತಿಳಿಸಿದರು. ಭಾರತೀಯ ವಾಯು ಪಡೆಯಿಂದ

ಅಕ್ಟೋಬರ್ 2 ರಂದು‌ ದಸರಾ ಏರ್ ಶೋ:ಭಾರತೀಯ ವಾಯುಪಡೆಯ ಸಾಹಸವನ್ನು ನೀವು ಕಣ್ತುಂಬಿಕೊಳ್ಳಿ Read More »

ಅ.1 ರಿಂದ ಪ್ರಾರಂಭವಾಗಲಿರುವ ಯುವ ದಸರಾ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ ನೋಡಿ

ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಅ.1ರಿಂದ 6 ರವರೆಗೆ 6ದಿನಗಳ ಕಾಲ ಯುವ ದಸರಾ ಕಾರ್ಯಕ್ರಮ ನಡೆಯಲಿದೆ. ಅ.1ರಂದು ಬಾಲಿವುಡ್ ಗಾಯಕ ಗುರು ರಾಂಧವ್ ಮತ್ತು ತಂಡ, ಅ.2ರಂದು ಬಾಲಿವುಡ್ ಗಾಯಕ ಮೋಹಿತ್ ಚೌಹಾಣ್ ಮತ್ತು ತಂಡ, ಅ.3ರಂದು ಬಾಲಿವುಡ್ ಖ್ಯಾತ ಗಾಯಕರಾದ ಮೊನಾಲಿ ಠಾಕೂರ್ ಮತ್ತು ತಂಡ, ಅ.4ರಂದು ಸ್ಯಾಂಡಲ್ ವುಡ್ ಗಾಯಕ ಸಂಜಿತ್ ಹೆಗಡೆ, ಚಂದನ್ ಶೆಟ್ಟಿ, ಮೀಡಿಯಾ ಸ್ಟೇಶನ್ ಅವರಿಂದ ಮನರಂಜನಾ ಕಾರ್ಯಕ್ರಮ, ಅ.5ರಂದು ಸ್ಯಾಂಡಲ್ ವುಡ್ ನೈಟ್ಸ್ ಕಾರ್ಯಕ್ರಮ, ಅ.6ರಂದು

ಅ.1 ರಿಂದ ಪ್ರಾರಂಭವಾಗಲಿರುವ ಯುವ ದಸರಾ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ ನೋಡಿ Read More »

ತಾಲೀಮಿನ ವೇಳೆ ಕಾವೇರಿ ಆನೆಯ ಕಾಲಿಗೆ ಚುಚ್ಚಿದ ಮೊಳೆ

ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಕಾವೇರಿ ಆನೆಯ ಕಾಲಿಗೆ ಚೂಪಾದ ಮೊಳೆ ಯೊಂದು ಚುಚ್ಚಿದ ಘಟನೆ ನಿನ್ನೆ ನಡೆದಿದೆ. ದಸರಾ ಆನೆಗಳ ಉಸ್ತುವಾರಿ ಹೊತ್ತವರ ಅಜಾಗರೂಕತೆಯಿಂದಾಗಿ ಭಾನುವಾರ ಬೆಳಿಗ್ಗೆ ತಾಲೀಮಿಗೆ ಹೊರಡುವ ವೇಳೆ ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಬಳಿ ಕಾಲಿಗೆ ಮೊಳೆಯೊಂದು ಚುಚ್ಚಿದ್ದು, ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಅದನ್ನು ತೆಗೆದು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನಿತ್ಯವೂ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ದಸರಾ ಗಜಪಡೆಯ ಮೆರವಣಿಗೆ ತಾಲೀಮು ನಡೆಯುತ್ತಿದ್ದು, ನಿನ್ನೆ ಬೆಳಿಗ್ಗೆ ಬೆಳಿಗ್ಗೆ 7.25ರ ವೇಳೆಗೆ

ತಾಲೀಮಿನ ವೇಳೆ ಕಾವೇರಿ ಆನೆಯ ಕಾಲಿಗೆ ಚುಚ್ಚಿದ ಮೊಳೆ Read More »

ಅಕ್ಟೋಬರ್ 2ರಂದು ದಸರಾ ಏರ್‌ ಶೋ

ಮೈಸೂರು: ಮೈಸೂರು ದಸರಾ ಉತ್ಸವದ ಅಂಗವಾಗಿ ಈ ಬಾರಿ ಬನ್ನಿಮಂಟಪದ ಮೈದಾನದಲ್ಲಿ ಅಕ್ಟೋಬರ್ 2ರಂದು ದಸರಾ ಏರ್‌ ಶೋ ನಡೆಯಲಿದೆ. ಈ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ಮಾಹಿತಿ ನೀಡಿದ್ದು, ಅಕ್ಟೋಬರ್ 2ಕ್ಕೆ ಏರ್ ಶೋ ಫಿಕ್ಸ್ ಆಗಿದೆ. ಈ ಬಗ್ಗೆ ಈಗಾಗಲೇ ರಕ್ಷಣಾ ಇಲಾಖೆಯೊಂದಿಗೆ ಮಾತುಕತೆ ಹಾಗೂ ಪತ್ರ ವ್ಯವಹಾರ ಮಾಡಲಾಗಿದೆ ಎಂದು ತಿಳಿಸಿದರು. ಅಕ್ಟೋಬರ್ 2ಕ್ಕೆ ಏರ್ ಶೋ ನಡೆಯಲಿದ್ದು, ಈ ಬಾರಿಯ ಏರ್ ಶೋ ನಲ್ಲಿ ನಡೆಯಲಿರುವ ಕಾರ್ಯಕ್ರಮಗಳನ್ನ ರಕ್ಷಣಾ

ಅಕ್ಟೋಬರ್ 2ರಂದು ದಸರಾ ಏರ್‌ ಶೋ Read More »

ಇಂದು ಮೈಸೂರಿಗೆ ದಸರಾ ಗಜಪಡೆಯ 2ನೇ ತಂಡ ಆಗಮನ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಗಜಪಡೆಯ ಎರಡನೇ ತಂಡದ 8 ಆನೆ ಇಂದು ಸಂಜೆ ವಿವಿಧ ಕ್ಯಾಂಪ್ ಗಳಿಂದ ಮೈಸೂರು ಅರಮನೆ ಆವರಣಕ್ಕೆ ಆಗಮಿಸಲಿವೆ. ಇನ್ನು ಒಂದು ದಿನ ಮೊದಲೆ ಬಲರಾಮ ಆನೆ ಅರಮನೆ ಪ್ರವೇಶ ಮಾಡಿದ್ದು ನಿನ್ನೆ ತಿತಿಮತಿ ಶಿಬಿರದಿಂದ ಆಗಮಿಸಿದ್ದಾನೆ. ಉಳಿದಂತೆ 2ನೇ ತಂಡದಲ್ಲಿ ವಿಕ್ರಮ, ಗೋಪಿ, ಜಯಪ್ರಕಾಶ್‌, ಕಾವೇರಿ, ದುರ್ಗಾಪರಮೇಶ್ವರಿ ಮತ್ತು ಲಕ್ಷ್ಮಿ ಆನೆಗಳು ಆಗಮಿಸಲಿವೆ. ದುಬಾರೆ ಆನೆ ಶಿಬಿರದಿಂದ ಕಾವೇರಿ, ವಿಕ್ರಮ, ಗೋಪಿ, ಕೆ. ಗುಡಿ ಆನೆ ಶಿಬಿರದಿಂದ ದುರ್ಗಾಪರಮೇಶ್ವರಿ,

ಇಂದು ಮೈಸೂರಿಗೆ ದಸರಾ ಗಜಪಡೆಯ 2ನೇ ತಂಡ ಆಗಮನ Read More »

ದಸರೆಯ ರಂಗೇರಿಸಲು ಸೆ.15 ರಿಂದ ಆರಂಭವಾಗಲಿದೆ ‘ಯುವ ಸಂಭ್ರಮ’

ಮೈಸೂರು: ಮೈಸೂರು ದಸರಾ ಮಹೋತ್ಸವದಲ್ಲಿ ಯುವ ಮನಸ್ಸುಗಳನ್ನ ಕುಣಿಸಿ ತಣಿಸುವ ‘ಯುವ ಸಂಭ್ರಮ’ ಸೆಪ್ಟಂಬರ್ 15ರಿಂದ ಆರಂಭವಾಗಲಿದೆ. ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಯುವಸಂಭ್ರಮ ಕಾರ್ಯಕ್ರಮವನ್ನು ಸೆ.15 ರಿಂದ 8 ದಿನಗಳ ಕಾಲ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಜಿಲ್ಲಾಡಳಿತದಿಂದ ಸಿದ್ದತೆ ನಡೆಸಿದೆ. ಈ ಬಾರಿ ನೃತ್ಯ ಕಾರ್ಯಕ್ರಮದೊಂದಿಗೆ ಸ್ಕಿಟ್, ಏಕ ಪಾತ್ರಾಭಿನಯ ಹಾಗೂ ಬ್ಯಾಂಡ್ ಮ್ಯೂಸಿಕ್‌ಗೆ ಅವಕಾಶ ನೀಡಲಾಗಿದ್ದು, ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಲು ಉದ್ದೇಶದಿಂದ ನೃತ್ಯದ ಜೊತೆಗೆ ಇತರೆ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ.

ದಸರೆಯ ರಂಗೇರಿಸಲು ಸೆ.15 ರಿಂದ ಆರಂಭವಾಗಲಿದೆ ‘ಯುವ ಸಂಭ್ರಮ’ Read More »

ಮೈಸೂರು ದಸರಾಗೆ ಸರ್ಕಾರದಿಂದ 18.50 ಕೋಟಿ ರೂ ಬಿಡುಗಡೆ

ಮೈಸೂರು: ಸೆಪ್ಟೆಂಬರ್ 29 ರಿಂದ ಆರಂಭವಾಗಲಿರುವ ನಾಡಹಬ್ಬ ಮೈಸೂರು ದಸರಾ ಉತ್ಸವ ಕಾರ್ಯಕ್ರಮಗಳ ವೆಚ್ಚಗಳಿಗಾಗಿ ರಾಜ್ಯ ಸರ್ಕಾರ 18.50 ಕೋಟಿ ರೂಪಾಯಿ ಹಣ ಬಿಡುಗಡೆಗೊಳಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬುಧವಾರ ಹಣ ಬಿಡುಗಡೆ ಸಂಬಂಧ ಸರ್ಕಾರಿ ಆದೇಶ ಹೊರಡಿಸಿದ್ದಾರೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದ್ದಾರೆ. ಮಂಡ್ಯ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಶ್ರೀರಂಗಪಟ್ಟಣ ಹಾಗೂ ಚಾಮರಾಜ ನಗರ ಜಿಲ್ಲೆಗಳಲ್ಲಿ ನಡೆಯುವ ದಸರಾ ಸಂಬಂಧಿತ ವೆಚ್ಚಗಳೂ ಇದರಲ್ಲಿ ಸೇರಿವೆ ಎಂದು ಅವರು

ಮೈಸೂರು ದಸರಾಗೆ ಸರ್ಕಾರದಿಂದ 18.50 ಕೋಟಿ ರೂ ಬಿಡುಗಡೆ Read More »

ಸೆ.29ರಿಂದ ಅ.13ರವರೆಗೆ ದಸರಾ ಫಲಪುಷ್ಪ ಪ್ರದರ್ಶನ

ಮೈಸೂರು: ದಸರಾ ಫಲಪುಷ್ಪ ಪ್ರದರ್ಶನವನ್ನು ಕರ್ಜನ್ ಪಾರ್ಕ್ ಆಶ್ರಯದಲ್ಲಿ ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ತೋಟಗಾರಿಕೆ ಸಂಘದ ವತಿಯಿಂದ ಸೆ.29ರಿಂದ ಅ.13ರವರೆಗೆ ಕುಪ್ಪಣ್ಣ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕರು ಬೆಳೆಸಿರುವ ಆರ್ಕಿಡ್ಸ್, ಅಂಥೋರಿಯಂ, ಬೋನ್ಸಾಯಿ ಗಿಡಗಳನ್ನು ಉದ್ಯಾನವನದಲ್ಲಿ ಪ್ರದರ್ಶಿಸಲು ಅವಕಾಶವಿದ್ದು, ಸಂಘ ಸಂಸ್ಥೆಗಳು, ನಾಗರೀಕರು, ನರ್ಸರಿಯವರು ಸೆ.5ರೊಳಗೆ ತಮ್ಮ ಹೆಸರನ್ನು ಕರ್ಜನ್ ಪಾರ್ಕ್ ನಲ್ಲಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ.8970115883 ಸಂಪರ್ಕಿಸಬಹುದು.

ಸೆ.29ರಿಂದ ಅ.13ರವರೆಗೆ ದಸರಾ ಫಲಪುಷ್ಪ ಪ್ರದರ್ಶನ Read More »

ಸೆ.29ರಿಂದ ಅ.16ರವರೆಗೆ 2 ಕಡೆ ದಸರಾ ಆಹಾರ ಮೇಳ

ಮೈಸೂರು: ದಸರಾ ಮಹೋತ್ಸವ ಪ್ರಯುಕ್ತ ಜನಪ್ರಿಯ ಆಹಾರ ಮೇಳವನ್ನು ಸೆ.29ರಿಂದ ಅ.16ರವರೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಮತ್ತು ಲಲಿತ್ ಮಹಲ್ ಹೋಟೆಲ್ ಪಕ್ಕದ ಮುಡಾ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ. ಆಹಾರ ಮೇಳದಲ್ಲಿ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಟಿಬೇಟಿಯನ್, ಕಾಶ್ಮೀರಿ, ಪಂಜಾಬಿ, ರಾಜಸ್ಥಾನಿ, ಈಶಾನ್ಯ ಭಾರತ, ಆಂಧ್ರ, ಕೇರಳ, ತಮಿಳುನಾಡು, ಮರಾಠಿ ಶೈಲಿಯಲ್ಲಿನ ಸಸ್ಯಾಹಾರಿ ಮತ್ತು ಶಾಖಾಹಾರಿ ಆಹಾರ ಪದ್ಧತಿ ಇರಲಿದ್ದು ಚೈನೀಸ್, ಇಟಾಲಿಯನ್, ಫ್ರೆಂಚ್, ಆಫ್ರಿಕನ್, ಆಹಾರ ಪದ್ಧತಿಯಡಿಯಲ್ಲಿ ಆಹಾರ ತಯಾರಿಸುವ ಅಡುಗೆಗಳು, ಸಿರಿಧಾನ್ಯ, ಸಹಜ

ಸೆ.29ರಿಂದ ಅ.16ರವರೆಗೆ 2 ಕಡೆ ದಸರಾ ಆಹಾರ ಮೇಳ Read More »

Scroll to Top