Mysuru Palace

helicopter-ride-in-mysuru-4

ಮೈಸೂರು ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಂದೂಡಿಕೆ

ಮೈಸೂರು: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ನಿಧನದ ಹಿನ್ನೆಲೆಯಲ್ಲಿ ಮೂರು ದಿನಗಳ ಶೋಕಾಚರಣೆ ಇರುವುದರಿಂದ ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ ಎಂದು ಅರಮನೆ ಮಂಡಳಿಯ ಉಪನಿರ್ದೇಶಕರು ತಿಳಿಸಿದ್ದಾರೆ. ದಿನಾಂಕ: 29-12-2019 ರಿಂದ 31-12-2019 ರವರೆಗೆ ಸಂಜೆ 7 ರಿಂದ 9 ಗಂಟೆಯವರೆಗೆ ನಡೆಯಬೇಕಾಗಿದ್ದ ಸಾಂಸ್ಕøತಿಕ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಈ ದಿನಗಳಂದು ಅರಮನೆಯ ದೀಪಾಲಂಕಾರ ವ್ಯವಸ್ಥೆ ಇರುವುದಿಲ್ಲ. ಆದರೆ ಅರಮನೆಯು ಎಂದಿನಂತೆ ಪ್ರವಾಸಿಗರಿಗೆ ಬೆಳಿಗ್ಗೆ 10 ರಿಂದ ಸಂಜೆ 5-30 ರವರೆಗೆ […]

ಮೈಸೂರು ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಂದೂಡಿಕೆ Read More »

ಅರಮನೆಯ ಸ್ಟ್ರಾಂಗ್‌ರೂಮ್‌ ಸೇರಿದ ರತ್ನ ಖಚಿತ ಸಿಂಹಾಸನ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆ ನೆಲಮಾಳಿಗೆಯಿಂದ ದರ್ಬಾರ್‌ ಹಾಲ್‌ಗೆ ತಂದು ಜೋಡಿಸಲಾಗಿದ್ದ ರತ್ನ ಖಚಿತ ಸಿಂಹಾಸನವನ್ನು ಸೂಕ್ತ ಪೊಲೀಸ್‌ ಬಂದೋಬಸ್ತ್ ನಲ್ಲಿ ಸ್ಟ್ರಾಂಗ್‌ ರೂಂಗೆ ಸಾಗಿಸಲಾಗಿದೆ. ಬುಧವಾರ ರತ್ನ ಖಚಿತ ಸಿಂಹಾಸನದ ಅವರೋಹಣ ಕಾರ್ಯಕ್ರಮ ನಡೆದಿದ್ದು, ಅರಮನೆ ಕನ್ನಡಿ ತೊಟ್ಟಿಯಲ್ಲಿ ಬೆಳಿಗ್ಗೆ ಗಣಪತಿ ಹೋಮ, ಚಾಮುಂಡಿ ಪೂಜೆ, ಶಾಂತಿ ಹೋಮ ನೆರವೇರಿಸಲಾಯಿತು. ಬಳಿಕ ದರ್ಬಾರ್‌ ಹಾಲ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿ ಕಂಗೊಳಿಸುತ್ತಿದ್ದ ಸಿಂಹಾಸನ ವನ್ನು ಮೊದಲಿಗೆ 14 ಬಿಡಿ

ಅರಮನೆಯ ಸ್ಟ್ರಾಂಗ್‌ರೂಮ್‌ ಸೇರಿದ ರತ್ನ ಖಚಿತ ಸಿಂಹಾಸನ Read More »

ಭಾರಿ ಮಳೆಗೆ ಅಂಬಾವಿಲಾಸ ಅರಮನೆಯ ಚಾವಣಿ ಕುಸಿತ

ಮೈಸೂರು: ನಗರದಾದ್ಯಂತ ಭಾನುವಾರ ರಾತ್ರಿಯಿಡೀ ಸುರಿದ ಮಳೆಗೆ ಇಲ್ಲಿನ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ಚಾವಣಿಯ ಒಂದು ಅಂಚು ಕುಸಿದಿದೆ. ನಾಡಹಬ್ಬಕ್ಕೆ ಕೆಲವೇ ದಿನಗಳಿದ್ದು ಬಿರುಸಿನ ಸಿದ್ಧತೆ ನಡೆಯುತ್ತಿರುವಾಗ ಹೀಗಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಸೋಮವಾರ ಬೆಳಿಗ್ಗೆ 9.30ರ ಅಂದಾಜಿಗೆ, ಸೆಸ್ಕ್‌ ಕಚೇರಿಯ ಹಿಂಬದಿ ಇರುವ ಶೌಚಾಲಯದ ಮೇಲಂತಸ್ತಿನ ಚಾವಣಿ ಕುಸಿದಿದ್ದು ಅರಮನೆಯ ಸಿಬ್ಬಂದಿ ಮಣ್ಣನ್ನು ತೆರವುಗೊಳಿಸಿದ್ದಾರೆ. ’ಅರಮನೆಯ ಚಾವಣಿ ಮತ್ತು ಗೋಡೆ ಕೆಲವೆಡೆ ಬಿರುಕು ಬಿಟ್ಟಿದ್ದು, ಅಲ್ಲೆಲ್ಲ ಪ್ಲಾಸ್ಟರ್‌ ಮಾಡಲಾಗಿದೆ. ಭಾನುವಾರ ಸುರಿದ ಮಳೆಯಿಂದಾಗಿ ಅರಮನೆಯ ಎಡಭಾಗದ ಚಾವಣಿಯಲ್ಲಿ

ಭಾರಿ ಮಳೆಗೆ ಅಂಬಾವಿಲಾಸ ಅರಮನೆಯ ಚಾವಣಿ ಕುಸಿತ Read More »

ಮೈಸೂರು ಅರಮನೆಯಲ್ಲಿ ಗಜಪಡೆಗೆ ಅದ್ದೂರಿ ಸ್ವಾಗತ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಲು ಆಗಮಿಸಿದ ಗಜಪಡೆಯ ಮೊದಲ ತಂಡ ಅರಮನೆಯ ಜಯಮಾರ್ಥಾಂಡ ದ್ವಾರದಲ್ಲಿ ಸೋಮವಾರ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು. ಇದರೊಂದಿಗೆ ಮೈಸೂರು ನಗರದಲ್ಲಿ ದಸರಾ ಸಡಗರ, ಸಂಭ್ರಮ ಇಂದಿನಿಂದಲೇ ಗರಿಗೆದರಿದ್ದು, ದಸರಾ‌ ಮಹೋತ್ಸವಕ್ಕೆ ದಿನಗಣನೆಯೂ ಆರಂಭವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ, ಅನೆಗಳಿಗೆ ಪುಷ್ಪಾರ್ಚನೆ ಮಾಡಿ ಸ್ವಾಗತ ಕೋರಿದರು. ಆರ್ಜುನ ನೇತೃತ್ವದ ಆರು ಆನೆಗಳು ಇಂದು ಅರಮನೆಗೆ ಆಗಮಿಸಿವೆ. ಇದಕ್ಕು ಮೊದಲು ಅಶೋಕಪುರಂನ ಅರಣ್ಯ ಭವನದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಮಾಡಿ‌ ಆನೆಗಳನ್ನು ಬೀಳ್ಕೊಡಲಾಯಿತು. ಅರಣ್ಯ

ಮೈಸೂರು ಅರಮನೆಯಲ್ಲಿ ಗಜಪಡೆಗೆ ಅದ್ದೂರಿ ಸ್ವಾಗತ Read More »

ಮೈಸೂರು ಅರಮನೆಯಲ್ಲಿ ಇಂಗ್ಲಿಷ್ ಅವತರಣಿಕೆಯ ಧ್ವನಿ, ಬೆಳಕು ಕಾರ್ಯಕ್ರಮ ಆರಂಭ

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆ ಆವರಣದಲ್ಲಿ ಕನ್ನಡ ಅವತರಣಿಕೆಯ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಪ್ರವಾಸಿಗರ ಅನುಕೂಲಕ್ಕಾಗಿ ಇಂಗ್ಲಿಷ್‌ನಲ್ಲೂ ಆರಂಭಿಸಲಾಗಿದೆ. ಸೋಮವಾರದಿಂದ ಬುಧವಾರದ ವರೆಗೆ ರಾತ್ರಿ 7 ರಿಂದ 8 ರವರೆಗೆ ಕನ್ನಡ ಅವತರಣಿಕೆಯ ಧ್ವನಿ ಮತ್ತು ಬೆಳಕು ಕಾರ್ಯಕ್ರಮ, ಗುರುವಾರ, ಶುಕ್ರವಾರ, ಶನಿವಾರ ರಾತ್ರಿ 7 ರಿಂದ 8 ರವರೆಗೆ ಇಂಗ್ಲಿಷ್‌ನಲ್ಲಿ, ಶನಿವಾರ ರಾತ್ರಿ 8.15 ರಿಂದ 9.15 ರವರೆಗೆ ಕನ್ನಡದಲ್ಲಿ ಕಾರ್ಯಕ್ರಮ ನಡೆಲಿದೆ. ಕನ್ನಡ ಅವತರಣಿಕೆಯ ಕಾರ್ಯಕ್ರಮಕ್ಕೆ ವಯಸ್ಕರಿಗೆ ₹ 70, ಮಕ್ಕಳಿಗೆ ₹

ಮೈಸೂರು ಅರಮನೆಯಲ್ಲಿ ಇಂಗ್ಲಿಷ್ ಅವತರಣಿಕೆಯ ಧ್ವನಿ, ಬೆಳಕು ಕಾರ್ಯಕ್ರಮ ಆರಂಭ Read More »

Scroll to Top