ಕಂಕಣ ಸೂರ್ಯಗ್ರಹಣ: ಬಾನಂಗಳದಲ್ಲಿ ನಡೆದ ಅಪರೂಪದ ವಿದ್ಯಮಾನವನ್ನು ಕಣ್ತುಂಬಿಕೊಂಡ ಸಾವಿರಾರು ವಿದ್ಯಾರ್ಥಿಗಳು
ಮೈಸೂರು: ಸೌರಮಂಡಲದ ಅತ್ಯಂತ ಅಪರೂಪದ ಕಂಕಣ ಸೂರ್ಯಗ್ರಹಣ ಇಂದು ವಿಶ್ವದ ವಿವಿಧೆಡೆ ಘಟಿಸಿದ್ದು, ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಈ ವಿಸ್ಮಯವನ್ನು ಲಕ್ಷಾಂತರ ಮಂದಿ ವೀಕ್ಷಿಸಿ ಚಕಿತಗೊಂಡರು. ಬೆಳಗ್ಗೆ 8.04ಕ್ಕೆ ಆರಂಭವಾದ ಸೂರ್ಯಗ್ರಹಣ ಬೆಳಿಗ್ಗೆ 11:11ಕ್ಕೆ ಅಂತ್ಯಗೊಂಡಿತು. ಮೈಸೂರಿನ ಮೈಸೂರು ಸೈನ್ಸ್ ಫೌಂಡೇಷನ್, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮೈಸೂರು ವಿಶ್ವ ವಿದ್ಯಾಲಯ ಸಹಯೋಗದಲ್ಲಿ ಇಂದು ಬೆಳಗ್ಗೆ 8ರಿಂದ 11.05ರವರೆಗೆ ಕ್ರಾಫರ್ಡ್ ಹಾಲ್ ಎದುರಿನ ವಿಶ್ವ ವಿದ್ಯಾಲಯದ ಓವೆಲ್ ಮೈದಾನದಲ್ಲಿ’ವಿಜ್ಞಾನ ಕೌತುಕ ವೀಕ್ಷಣೆಯ ಹಬ್ಬ’ ಆಯೋಜಿಸಿತ್ತು. ಎರಡು […]