ಬಿಸಿಲ ಬೇಗೆಗೆ ಕಾದು ಕೆಂಡವಾದ ಮೈಸೂರು: ಇತಿಹಾಸದಲ್ಲೇ ಗರಿಷ್ಠ ಉಷ್ಣಾಂಶ ದಾಖಲು..!
ಬೆಂಗಳೂರು: ಬೇಸಿಗೆ ಆರಂಭದ ದಿನಗಳಲ್ಲೇ ಅರಮನೆ ನಗರಿ ಮೈಸೂರು ಬಿಸಿಲ ಬೇಗೆಗೆ ಕೆಂಡವಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿ ಮಾರ್ಚ್ ತಿಂಗಳ ಗರಿಷ್ಠ ತಾಪಮಾನ 37.9 ಡಿಗ್ರಿ ತಲುಪಿದೆ. ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬೇಸಿಗೆ ಆರಂಭದಲ್ಲೇ ಬಿಸಿಲ ಝುಳ ಮೈಸುಡುತ್ತಿದ್ದು ಪರಿಣಾಮ ಜನರು ಹೈರಾಣಾಗಿದ್ದಾರೆ. ಮೈಸೂರಿನಲ್ಲಿ ಗರಿಷ್ಠ ಉಷ್ಣಾಂಶ: ಮಾ.1 ರಂದು 33.7, 4ರಂದು 34.5, 5ರಂದು 35.8 ಹಾಗೂ 6ರಂದು 36.9 ಡಿ.ಸೆ. ದಾಖಲಾಗಿತ್ತು. ಮಾ.7ರ ಗುರುವಾರ ಮತ್ತಷ್ಟು ಏರಿಕೆ ಕಂಡ […]
ಬಿಸಿಲ ಬೇಗೆಗೆ ಕಾದು ಕೆಂಡವಾದ ಮೈಸೂರು: ಇತಿಹಾಸದಲ್ಲೇ ಗರಿಷ್ಠ ಉಷ್ಣಾಂಶ ದಾಖಲು..! Read More »