ಮೈಸೂರು ರೈಲ್ವೆ ನಿಲ್ದಾಣ ಮರುವಿನ್ಯಾಸ ಕಾರ್ಯ ಹಿನ್ನೆಲೆ ಜೂ.16ರಿಂದ 23 ರವರೆಗೆ 30 ರೈಲುಗಳ ಸಂಚಾರ ರದ್ದು
ಮೈಸೂರು: ಮೈಸೂರು ರೈಲು ಯಾರ್ಡ್ ಹಾಗೂ ಚಾಮರಾಜನಗರ ಮುಖ್ಯ ಮಾರ್ಗದಲ್ಲಿ ದುರಸ್ತಿ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂನ್ 16ರಿಂದ 24ರವರೆಗೆ ರೈಲುಗಳ ಸಂಚಾರದಲ್ಲಿ ರದ್ದುಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ. ಪ್ಲಾಟ್ ಫಾರಂ ಸಂಖ್ಯೆ 5 ಮತ್ತು 6 ರಿಂದ ಚಾಮರಾಜನಗರ ಕಡೆಗೆ ಸಂಪರ್ಕ ಕಲ್ಪಿಸುವುದನ್ನು ಯಾರ್ಡ್ ಮರುವಿನ್ಯಾಸ ಕಾಮಗಾರಿ ಒಳಗೊಂಡಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಸದ್ಯ ಪ್ಲಾಟ್‍ಫಾರಂ 5 ಮತ್ತು 6ಕ್ಕೆ ಬರುವ ರೈಲುಗಳು ಚಾಮರಾಜನಗರ ಕಡೆ ತಿರುಗಿಸಲು ಸಾಧ್ಯವಾಗುತ್ತಿರಲಿಲ್ಲ. ಪ್ಲಾಟ್‍ಫಾರಂ 1 ರಿಂದ 4 […]