ಇಸ್ರೋ ಮತ್ತೊಂದು ಮೈಲುಗಲ್ಲು ಜಿಸ್ಯಾಟ್-31 ಉಪಗ್ರಹ ಉಡಾವಣೆ ಯಶಸ್ವಿ

ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸಲಿದೆ ಪಿಎಸ್​ಎಲ್​ವಿ ಉಡಾಹಕ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಇದುವರೆಗೂ ಅಭಿವೃದ್ಧಿಪಡಿಸಿರುವ ಉಡಾಹಕಗಳು ನಿಶ್ಚಿತವಾದ ಒಂದು ಕಕ್ಷೆಯಲ್ಲಿ ಉಪಗ್ರಹಗಳನ್ನು ಬಿಡುಗಡೆ ಮಾಡುತ್ತಿದ್ದವು. ಇದೀಗ, ಇಸ್ರೋ ಅಭಿವೃದ್ಧಿಪಡಿಸಿರುವ ಪಿಎಸ್​ಎಲ್​ವಿ-ಸಿ45 ಉಡಾಹಕ ಮೂರು ಪ್ರತ್ಯೇಕ ಕಕ್ಷೆಗಳಿಗೆ ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಇದು ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸಕ್ಕೆ ಕಾರಣವಾಗಲಿದೆ ಎಂದು ಇಸ್ರೋ ಹೇಳಿದೆ.

ಈಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಇಸ್ರೋ ಅಧ್ಯಕ್ಷ ಕೆ. ಶಿವನ್​, ಮಾರ್ಚ್​ ಕೊನೆಯ ವಾರದಲ್ಲಿ ಪಿಎಸ್​ಎಲ್​ವಿ-ಸಿ45 ಉಡಾಹಕ ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳಲಿದೆ. ಇದು ಡಿಆರ್​ಡಿಒ ಅಭಿವೃದ್ಧಿಪಡಿಸಿರುವ ವಿದ್ಯುನ್ಮಾನ ಬೇಹುಗಾರಿಕಾ ಉಪಗ್ರಹ ಎಮಿಸಾಟ್​ (Emisat) ಮತ್ತು ವಿದೇಶದ 28 ಉಪಗ್ರಹಗಳನ್ನು ಹೊತ್ತೊಯ್ಯಲಿದೆ. ಇದು ಪಿಎಸ್​-4 ಹಂತ ಎಂಬ (ರಾಕೆಟ್​ನ ಕೊನೆಯ ಹಂತ) ವೇದಿಕೆಯನ್ನೂ ಹೊಂದಿರಲಿದೆ ಎಂದರು.

ಡಿಆರ್​ಡಿಒದ ಎಮಿಸ್ಯಾಟ್​ ಉಪಗ್ರಹವನ್ನು 763 ಕಿ.ಮೀ. ಕಕ್ಷೆಗೆ ಬಿಡುಗಡೆ ಮಾಡುವ ಪಿಎಸ್​ಎಲ್​ವಿ-ಸಿ45 504 ಕಿ.ಮೀ. ಕಕ್ಷೆಯಲ್ಲಿ 28 ವಿದೇಶಿ ಉಪಗ್ರಹಗಳನ್ನು ಬಿಡುಗಡೆ ಮಾಡಲಿದೆ. 485 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಸ್ವತಃ ಬಿಡುಗಡೆಗೊಳ್ಳಲಿದೆ. ಇದು ಭವಿಷ್ಯದ ಬಾಹ್ಯಾಕಾಶ ಯೋಜನೆಗಳ ಪ್ರಯೋಗಗಳಿಗೆ ವೇದಿಕೆಯಂತೆ ಕಾರ್ಯನಿರ್ವಹಿಸಲಿದೆ ಎಂದು ವಿವರಿಸಿದರು.

ಹೊಚ್ಚಹೊಸ ರೂಪ: ಪಿಎಸ್​ಎಲ್​ವಿ-ಸಿ45 ಈ ಬಾರಿ ಹೊಚ್ಚ ಹೊಸ ರೂಪದಲ್ಲಿ ಉಡಾವಣೆಗೊಳ್ಳಲಿದೆ. ಇದು ಒಟ್ಟು ನಾಲ್ಕು ಸ್ಟ್ರ್ಯಾಪ್​ಗಳನ್ನು ಹೊಂದಿರಲಿದೆ. ಜನವರಿ 24ರಂದು ಉಡಾವಣೆಗೊಂಡಿದ್ದ ಪಿಎಸ್​ಎಲ್​ವಿ-ಸಿ45 ಉಡಾಹಕದ ಕೊನೆಯ ಹಂತವು ಬ್ಯಾಟರಿಚಾಲಿತವಾಗಿತ್ತು. ಆದರೆ ಈ ಬಾರಿ ಅದು ಸೌರಫಲಕಗಳನ್ನು ಬಳಸಿಕೊಂಡು ತನ್ನನ್ನು ತಾನು 6 ತಿಂಗಳು ಕ್ರಿಯಾಶೀಲವಾಗಿರಿಸಿಕೊಳ್ಳಲಿದೆ ಎಂದು ಕೆ. ಶಿವನ್​ ತಿಳಿಸಿದರು.

ಕೃಪೆ: ವಿಜಯವಾಣಿ

Leave a Comment

Scroll to Top