ನವದೆಹಲಿ: ಅಮೆರಿಕದ ಜಿಪಿಎಸ್‌ಗೆ ಗುಡ್‌ಬೈ ಹೇಳಿ ನಮ್ಮದೇ ಸ್ವದೇಶಿ ಜಿಪಿಎಸ್ ಬಳಸುವ ಕಾಲ ಹತ್ತಿರವಾಗಿದೆ. ಸ್ವದೀಶಿ ಜಿಪಿಎಸ್ ‘ನಾವಿಕ್’ ಅನ್ನು ಇಸ್ರೊ ಅಭಿವೃದ್ಧಿಪಡಿಸಿದ್ದು ಇದನ್ನು ಕ್ವಾಲ್‌ಕಾಮ್ ಕಂಪನಿ ತನ್ನ ಸ್ನ್ಯಾಪ್‌ಡ್ರ್ಯಾಗನ್ ಚಿಪ್‌ಗಳಲ್ಲಿ ಅಳವಡಿಸಿ ಬಿಡುಗಡೆ ಮಾಡಿದೆ. ಶೀಘ್ರದಲ್ಲಿ ಎಲ್ಲಾ ಮೊಬೈಲ್‌ಗಳಲ್ಲಿ ಲಭ್ಯವಾಗಲಿದೆ.
ಜಿಪಿಎಸ್ ಮತ್ತು ನಾವಿಕ್ ಎರಡೂ ಕೂಡ ಉಪಗ್ರಹ ಆಧಾರಿತ ನೇವಿಗೇಷನ್ ಸಿಸ್ಟಮ್‌ಗಳು. ಈ ಮೂಲಕ ಜಗತ್ತಿನ ಬಹುಪಾಲು ಭೂಭಾಗವನ್ನ ಆಕಾಶದಿಂದ ನೋಡಲು ಸಾಧ್ಯವಾಗ್ತಾ ಇದೆ. ಇದುವರೆಗೂ ಅಮೆರಿಕಾ ಅಭಿವೃದ್ಧಿ ಪಡಿಸಿರೋ ಜಿಪಿಎಸ್ ಅನ್ನೋ ಜಾಗತಿಕವಾಗಿ ಬಳಸಲಾಗ್ತಿತ್ತು. ಸದ್ಯ ಭಾರತದ ನಾವಿಕ್ ಕೂಡಾ ಜಿಪಿಎಸ್ ರೀತಿಯಲ್ಲೇ ಬಳಕೆಗೆ ಬರಲಿದೆ.
ಇಂದು ಯಾವುದೇ ಸ್ಮಾರ್ಟ್‌ಫೋನ್ ತಗೊಂಡ್ರೂ, ಅದರಲ್ಲಿ ಇನ್‌ಬಿಲ್ಟ್ ಆಗಿ ಗೂಗಲ್ ಮ್ಯಾಪ್ ಇರುತ್ತವೆ. ಜಿಪಿಎಸ್ ತಂತ್ರಜ್ಞಾನವೂ ಇದ್ದೇ ಇರುತ್ತೆ. ಆದ್ರೆ ಸದ್ಯದಲ್ಲೇ ಜಿಪಿಎಸ್‌ಗೆ ಪರ್ಯಾಯವಾದ ಭಾರತದ ತಂತ್ರಜ್ಞಾನ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಲ್ಪಡಲಿದೆ. ಅದುವೇ ನಮ್ಮ ಹೆಮ್ಮೆಯ ಇಸ್ರೋ ಅಭಿವೃದ್ಧಿ ಪಡಿಸಿರೋ ನಾವಿಕ್.
ಜಿಪಿಎಸ್‌ಗಿಂತಲೂ ಅಡ್ವಾನ್ಸ್‌ಡ್ ಈ ನಾವಿಕ್:
ನಾವಿಕ್ ತಂತ್ರಜ್ಞಾನ ಜಿಪಿಎಸ್‌ಗಿಂತಲೂ ಅಡ್ವಾನ್ಸ್‌ಡ್ ತಂತ್ರಜ್ಙಾನ ಹೊಂದಿದೆ. ಜಾಗತಿಕವಾಗಿಯೂ ಇಸ್ರೋದ ನಾವಿಕ್‌ಗೆ ಮನ್ನಣೆ ಸಿಕ್ಕಿದೆ. ಹೀಗಾಗಿ ಸಾಕಷ್ಟು ಮೊಬೈಲ್ ಕಂಪನಿಗಳು ಭಾರತದಲ್ಲಿ ಮುಂಬರುವ ದಿನಗಳಿಂದಲೇ ನಾವಿಕ್ ಅನ್ನು ಜಿಪಿಎಸ್‌ಗೆ ಪರ್ಯಾಯವಾಗಿ ಬಳಸಲು ತೀರ್ಮಾನಿಸಿವೆ.
5 ಮೀಟರ್‌ವರೆಗಿನ ಚಿತ್ರ ಸ್ಪಷ್ಟವಾಗಿ ಸೆರೆ:
ಜಿಪಿಎಸ್ ತಂತ್ರಜ್ಞಾನ ನೆಲದಿಂದ 20 ಮೀಟರ್ ವರೆಗಿನ ಚಿತ್ರಗಳನ್ನ ಮಾತ್ರವೇ ಸ್ಪಷ್ಟವಾಗಿ ನೀಡುತ್ತೆ. 20 ಮೀಟರ್‌ಗಿಂತಲೂ ಸಮೀಪದ ಚಿತ್ರಣವನ್ನ ಸೆರೆ ಹಿಡಿಯಲು ಸಾಧ್ಯವಿಲ್ಲ. ಆದ್ರೆ ಭಾರತದ ನಾವಿಕ್, 5 ಮೀಟರ್‌ವರೆಗಿನ ಚಿತ್ರಣವನ್ನೂ ಸ್ಪಷ್ಟವಾಗಿ ಸೆರೆಹಿಡಿಯಬಲ್ಲದು. ಅಂದ್ರೆ ಒಬ್ಬ ವ್ಯಕ್ತಿಯ ತೀರಾ ಸಮೀಪಕ್ಕೆ ಹೋಗಿ ಆತನ ಚಿತ್ರವನ್ನ ಸೆರೆಹಿಡಿಯೋದು ನಾವಿಕ್‌ನಿಂದ ಸಾಧ್ಯವಿದೆ. ಹಾಗೇನೇ ಯಾವುದೇ ಒಂದು ಕಟ್ಟಡದ ಅತ್ಯಂತ ಸಮೀಪದ ಚಿತ್ರಗಳನ್ನೂ ನಾವಿಕ್ ನೀಡಬಲ್ಲದು.
ಕ್ವಾಲ್ಕಾಂ & ಇಸ್ರೋ ನಡುವೆ ಸಹಭಾಗಿತ್ವ:
ಅಮೆರಿಕದ ದೂರಸಂಪರ್ಕ ಕಂಪೆನಿ ಕ್ವಾಲ್ಕಾಂ ಮತ್ತು ಇಸ್ರೋ ನಡುವೆ ಸಹಭಾಗಿತ್ವ ಏರ್ಪಟ್ಟಿದೆ. ಈ ಒಪ್ಪಂದದ ಬಳಿಕ ಕ್ವಾಲ್ಕಾಂ ಕಂಪನಿ ಹೊರತರಲಿರುವ ಹೊಸ ಮೊಬೈಲ್‌ಗಳಲ್ಲಿ ಇಸ್ರೋ ಅಭಿವೃದ್ಧಿ ಪಡಿಸಿರುವ ನಾವಿಕ್ (NavIC) ಸಿಗಲಿದೆ. ಅದಕ್ಕಾಗಿ ಸ್ನ್ಯಾಪ್‌ಡ್ರಾಗನ್ 720ಜಿ, ಸ್ನ್ಯಾಪ್‌ಡ್ರಾಗನ್ 662 ಮತ್ತು ಸ್ನ್ಯಾಪ್ ಡ್ರಾಗನ್460 ಎಂಬ ಹೊಸ ರೀತಿಯ ಪ್ರೊಸೆಸರ್‌ಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿ ಸಲಾಗಿದೆ. ಇದೇ ಮೊದಲ ಬಾರಿಗೆ ಚಿಪ್ ತಯಾರಿಕಾ ಸಂಸ್ಥೆಯೊಂದು ಇಸ್ರೋ ಜತೆಗೆ ಕೈಜೋಡಿಸಿದೆ.